ಅಕ್ಕಿ, ಗೋಧಿ ಪೂರೈಕೆ ಸ್ಥಗಿತ – ಸಿದ್ದಲಿಂಗ ಸ್ವಾಮೀಜಿ

ಅಕ್ಕಿ, ಗೋಧಿ ಪೂರೈಕೆ ಸ್ಥಗಿತ – ಸಿದ್ದಲಿಂಗ ಸ್ವಾಮೀಜಿ

ತುಮಕೂರು, ಫೆ. 4 : ಸಿದ್ದಗಂಗಾ ಮಠಕ್ಕೆ ಅಕ್ಕಿ, ಮತ್ತು ಗೋಧಿ ಪೂರೈಕೆಯನ್ನು ಸ್ಥಗಿತಗೊಳಿಸಿರುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ‘ಸದ್ಯಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದು,’ ಎಂದಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಮಠಕ್ಕೆ ಉಚಿತವಾಗಿ ನೀಡುತಿದ್ದ ಗೋಧಿ, ಅಕ್ಕಿ ತಡೆ ಹಿಡಿದಿರುವುದು ನಿಜ. ಉತ್ತರ ಭಾರತದಲ್ಲಿ ಈ ಯೋಜನೆ ದುರುಪಯೋಗ ಆಗುತ್ತಿದೆ ಎಂಬ ಆರೋಪ ಇದೆ. ಹಾಗಾಗಿ ಕಳೆದ ಎರಡು ತಿಂಗಳಿನಿಂದ ಪೂರೈಕೆ ನಿಲ್ಲಿಸಲಾಗಿದೆ,” ಎಂದು ವಿವರಿಸಿದ್ದಾರೆ.

ಇದಕ್ಕೂ ಮೊದಲು ಯುಟಿ ಖಾದರ್ ಆರೋಪಕ್ಕೆ ತಿರುಗೇಟು ನೀಡಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ, ಆಹಾರ ಪೂರೈಕೆಯನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ನಿಲ್ಲಿಸಲಾಗಿತ್ತು ಎಂದಿದ್ದರು. ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.
ಸುಮಾರು 750 ಕ್ವಿಂಟಾಲ್ ಅಕ್ಕಿ, 200 ಕ್ವಿಂಟಾಲ್ ಗೋಧಿ ಸರಕಾರದಿಂದ ಬರುತಿತ್ತು. ಕಳೆದ ಎರಡು ವರ್ಷದಿಂದ ಉಚಿತವಾಗಿ ನೀಡುತ್ತಿದ್ದರು. ಇದೀಗ ಪುನಃ ಆಹಾರ ಪೂರೈಕೆ ಆರಂಭಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರದಿದ್ದೇನೆ. ಕೇಂದ್ರಕ್ಕೂ ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related