“ಆಶ್ರಯ ಟ್ರಸ್ಟ್ ನಿಂದ ನಿರ್ಗತಿಕರಿಗೆ ಆಹಾರ ಪೂರೈಕೆ

  • In State
  • April 4, 2020
  • 459 Views
“ಆಶ್ರಯ ಟ್ರಸ್ಟ್ ನಿಂದ ನಿರ್ಗತಿಕರಿಗೆ ಆಹಾರ ಪೂರೈಕೆ

ಗಂಗಾವತಿ, ಏ. 04:  ಕರೋನ ಅಟ್ಟಹಾಸದಿಂದ ಕಂಗೆಟ್ಟಿರುವ ಜನರು 21 ದಿನ ಲಾಕ್  ಡೌನಗೆ ಒಳಗಾಗಿದ್ದಾರೆ. ನಗರದ ಬೀದಿ ಬೀದಿಗಳಲ್ಲಿ ಬಡವರು, ನಿರ್ಗತಿಕರು, ಭಿಕ್ಷುಕರು,  ಅಲೆಮಾರಿಗಳಿಗೆ ತುತ್ತು ಅನ್ನಕ್ಕಾಗಿ ಪರದಾಡ ಬಾರದೆಂಬ ಉದ್ದೇಶದಿಂದ  ಅವರ ಹೊಟ್ಟೆ ತುಂಬಿಲಿ  ಅವರು ಸುಖವಾಗಿರಲಿ ಎಂಬ ಉದ್ದೇಶದಿಂದ ಆಶ್ರಯ ಟ್ರಸ್ಟ್ ಬೆಂಗಳೂರು ಇದರ ಅಡಿಯಲ್ಲಿ ನಗರದ ಅಧ್ಯಕ್ಷರಾದ ವಿಜಯ್ ಕುಮಾರ್ ಜಯನಗರ ಹಾಗೂ ನೆಕ್ಕಂಟಿ ರಾಮಕೃಷ್ಣ ಕೋಟೆ ಕ್ಯಾಂಪ್, ಟ.ಕೆ.ದಾಸರ ಬೆಂಗಳೂರು, ಮಾಜಿ ನಗರಸಭೆ ಸದಸ್ಯರಾದ ವಡ್ಡರಹಟ್ಟಿ ವೀರಭದ್ರಪ್ಪ ನಾಯಕ,   ಇವರ ನೇತೃತ್ವದಲ್ಲಿ ದಿನನಿತ್ಯ 150 ರಿಂದ 200 ನೂರು ಜನರಿಗೆ ಊಟದ ವ್ಯವಸ್ಥೆಯನ್ನು  ಸ್ವತಃ ಇವರೇ ತಯಾರಿಸಿ ಅವರು ಇದ್ದ ಜಾಗದಲ್ಲಿ ಹೋಗಿ ಅವರಿಗೆ ಕುಡಿಯುವ ನೀರು, ಅನ್ನ-ಸಾಂಬಾರ್, ಮಜ್ಜಿಗೆ, ನೀಡಿ ಅವರನ್ನು ಸಂತೈಸಿದ್ದಾರೆ.

ಈ ಸಾಮಾಜಿಕ ಕಾರ್ಯವನ್ನು ಲಾಕ್ಡೌನ್ ದಿನಗಳು  ಮುಗಿಯುವವರೆಗೆ ಮುಂದುವರಿಸಲಾಗುವುದು  ಎಂದು ನೆಕ್ಕಂಟಿ ರಾಮಕೃಷ್ಣ ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದ್ದಾರೆ.

Related