ಸನ್ ಶೈನ್ ಶಾಲೆಯ ವಿರುದ್ಧ ಪ್ರತಿಭಟನೆ

  • In Crime
  • July 7, 2022
  • 219 Views
ಸನ್ ಶೈನ್ ಶಾಲೆಯ ವಿರುದ್ಧ ಪ್ರತಿಭಟನೆ

ಕೆ.ಆರ್ ಪುರಂ ನಲ್ಲಿರುವ ಸನ್ ಶೈನ್ ಶಾಲೆ ಸಂಸ್ಥೆಯು ಸುಮಾರು ೮ ವರ್ಷಗಳಿಂದ ವಿವಿಧ ಕಟ್ಟಡಗಳ ನಿರ್ಮಾಣ ಮಾಡಿಸಿಕೊಂಡು ಈಗ ಹಣ ಪಾವತಿಸದೆ ಸತಾಯಿಸುತ್ತಿದ್ದಾರೆಂದು ಗುತ್ತಿಗೆದಾರರು ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೂ ಹಣ ಪಾವತಿಸದೇ ಗುತ್ತಿಗೆದಾರನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಸನ್ ಶೈನ್ ಶಾಲೆ.

ಸೋಮವಾರ ಬೆಳಿಗ್ಗೆ ಶಾಲೆ ಆರಂಭಕ್ಕೂ ಮುನ್ನವೇ ಪ್ರಜ್ಞಾ ಮಾಲೀಕರು ಹಾಗೂ ಗುತ್ತಿಗೆದಾರ ಮತ್ತು ಕೆಲ ಸಂಘಟನೆಯ ಮುಖಂಡರುಗಳು, ಸನ್‌ಶೈನ್ ಶಾಲೆಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

 

ಈ ಕಾಮಗಾರಿಗಾಗಿ  ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ಸಾಲಗಾರರ ಒತ್ತಡ ಹೆಚ್ಚಾಗಿದೆ. ಇದರಿಂದ ನನಗೆ ಊಟಕ್ಕೆ ಕಷ್ಟಪಡುವಂತಾಗಿದ್ದು, ನನ್ನ ಪತ್ನಿ ಮತ್ತು ಮಕ್ಕಳು ಬೀದಿಗೆ ಬರುವಂತಾಗಿದೆ ಎಂದು ಗುತ್ತಿಗೆದಾರ ಗಣೇಶ್ ಮಾಧ್ಯಮಗಳ ಮುಂದೆ ಕಣ್ಣೀರಾಕಿದರು.

 

ಇದಲ್ಲದೇ ಹಲವಾರು ಕಾಮಗಾರಿ ಶಾಖೆಗಳಲ್ಲಿ ಶಾಲಾ ಕಟ್ಟಗಳನ್ನು ನಿರ್ಮಿಸಲು ಗುತ್ತಿಗೆ ನೀಡಿದ್ದರು.ಇದನ್ನೂ ಸಹ ೫ ವರ್ಷಗಳಿಂದ ಪಾವತಿಸದೇ ನನನ್ನು ಬೀದಿಗೆ ತಳ್ಳಿದ್ದಾರೆ. ಈ ವಂಚಕ ಸಂಸ್ಥೆಯು ಹಣ ಪಾವತಿಸದೇ ಹೋದಲ್ಲಿ ಆತ್ಮಹತ್ಯೆಗೆ ಶರಣಾಗುವುದಾಗಿ ಗುತ್ತಿಗೆದಾರ  ಗಣೇಶ್ ಧರಣಿಯಲ್ಲಿ ನಿರತರಾಗಿದ್ದಾರೆ.

 

 

Related