ಕರಾವಳಿಯ ಖಡಕ್ ಹೈದ ಸುನೀಲ್ ಶೆಟ್ಟಿ ರಾಕ್ಷಸಿ ಅಂತ ಹೇಳಿದ್ದು ಯಾರಿಗೆ..?

ಕರಾವಳಿಯ ಖಡಕ್ ಹೈದ ಸುನೀಲ್ ಶೆಟ್ಟಿ ರಾಕ್ಷಸಿ ಅಂತ ಹೇಳಿದ್ದು ಯಾರಿಗೆ..?

1990-91 ರಲ್ಲಿ ಈ ನಟನದೇ ಹವಾ. ಬಾಲಿವುಡ್ ಅಂಗಳಲ್ಲಿ ಕರಾವಳಿಯ ಖಡಕ್ ಹೈದ ಸುನೀಲ್ ಶೆಟ್ಟಿ ಅದ್ರೆ ಸಾಕು ಅವರ ಅಭಿಮಾನಿಗಳು ಇವರ ಸಿನಿಮಾ ನೋಡೋಕ್ಕೆ ಬಕಪಕ್ಷಿಗಳಂತೆ ಕಾಯುತ್ತಿದ್ದರು. ಅಬ್ಬಾ ಏನ್ ಅದ್ಭುತವಾಗಿ ನಟನೇ ಮಾಡ್ತಾರೆ ಅಂತ ಹೇಳ್ತಿದ್ರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ಈ ನಟ ಅದ್ ಯಾಕೋ ಏನೋ ಈಕೆಗೆ ರಾಕ್ಷಸಿ ಅಂತ ಕರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಸುನೀಲ್ ಶೆಟ್ಟಿ ಈಕೆಗೆ ರಾಕ್ಷಸಿ ಅಂತಾ ಕರೆದಿದ್ದಾರೆ. ಆಕೆ ಯಾರು ಗೊತ್ತಾ, ಬೇರೆ ಯಾರು ಅಲ್ಲ ತಮ್ಮ ಮಗಳಿಗೆ. ಹೌದು, ಸುನೀಲ್ ಶೆಟ್ಟಿ ಲಾಕ್ಡೌನ್ನಲ್ಲಂತೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಹಾಕುತ್ತಿದ್ದಾರೆ. ಹೀಗಿರುವಾಗಲೇ ಸುನೀಲ್ ಮಗಳನ್ನು ರಾಕ್ಷಸಿ ಎಂದು ಕರೆದಿರುವುದು ನೆಟ್ಟಿಗರ ಹುಬ್ಬೇರಿಸಿದೆ.

ನಟ ಸುನೀಲ್ ಶೆಟ್ಟಿ ತಮ್ಮ ಮಗಳು ಅತಿಯಾ ಶೆಟ್ಟಿ ಕುರಿತಾಗಿ ಆಗಾಗ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಮಗಳ ಕುರಿತಾಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಇದ್ದಕ್ಕಿದ್ದಂತೆ ಮಗಳನ್ನು ರಾಕ್ಷಿಸಿ ಎಂದಿದ್ದಾರೆ ಸುನೀಲ್ ಶೆಟ್ಟಿ. ಅದಕ್ಕೂ ಕಾರಣ ಇದೆ. ಸುನೀಲ್ ಶೆಟ್ಟಿಗೆ ಇಬ್ಬರು ಮಕ್ಕಳು. ಅತಿಯಾ ಹಾಗೂ ಅಹಾನ್.

ಇವರಿಬ್ಬರಲ್ಲಿ ಅಹಾನ್ ಸಾಧು ಆದರೆ ಅತಿತಾ ರಾಕ್ಷಸಿ ಎಂದು ಪ್ರೀತಿಯಿಂದ ಹೇಳಿದ್ದಾರೆ. ಹಾಗಂತ ಸುನೀಲ್ ಒಂದು ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Related