ಬಿಜೆಪಿ ಸೇರ್ಪಡೆಯಾದ ಸುಮಲತಾ

ಬಿಜೆಪಿ ಸೇರ್ಪಡೆಯಾದ ಸುಮಲತಾ

ಬೆಂಗಳೂರು:  ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಧಾಕರಿಸಿದ್ದ ಕಾರಣ ಇಂದು ಅಧಿಕೃತವಾಗಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಮ್ಮುಖದಲ್ಲಿ ಬಿಜೆಪಿ ಶಾಲು ಹಾಕಿ ಸುಮಲತಾ ಅವರನ್ನು ರಾಧಾ ಮೋಹನ್ ಅಗರ್ವಾಲ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಪಕ್ಷದ ಧ್ವಜ ನೀಡಿ ಮಾಜಿ ಸಿಎಂ ಯಡಿಯೂರಪ್ಪ ಸ್ಬಾಗತ ಮಾಡಿದರು. ಸುಮಲತಾ ಅವರಿಗೆ ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಾಥ್ ನೀಡಿದರು. ಇನ್ನು ಸುಮಲತಾ ಅವರ ಜೊತೆಗೆ ಮಾಜಿ ಬಿಗ್‌ ಬಾಸ್ ಸ್ಪರ್ಧಿ ಕ್ರಿಕೆಟರ್‌ ದೊಡ್ಡ ಗಣೇಶ್ ಕೂಡ ಬಿಜೆಪಿ ಸೇರ್ಪಡೆಯಾದರು.

ಇನ್ನು ಈ ಸಂದರ್ಭದಲ್ಲಿ ವಿಪಕ್ಷ ನಾಯಕರಾಗಿರುವ ಆರ್ ಅಶೋಕ್ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

Related