ಸುಮಲತಾ ಅಂಬರೀಶ್ ನಡೆ ಬಿಜೆಪಿ ಕಡೆ?

ಸುಮಲತಾ ಅಂಬರೀಶ್ ನಡೆ ಬಿಜೆಪಿ ಕಡೆ?

ಮಂಡ್ಯ : ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಳೆದ ಹಲವು ದಿನಗಳಿಂದ ಸುಮಲತಾ ಬಿಜೆಪಿ ಸೇರ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಸುಮಲತಾ ಮಾತ್ರ ತಮ್ಮ ಮುಂದಿನ ನಡೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅತ್ತ ಬಿಜೆಪಿ ನಾಯಕರು ಸುಮಲತಾ ಬಿಜೆಪಿ ಸೇರ್ತಾರೆ ಅಂತಿದ್ರೆ, ಇತ್ತ ಸುಮಲತಾ ಮಾತ್ರ ಜನಾಭಿಪ್ರಾಯ ಕೇಳ್ತೀನಿ ಅಂತ ಅಡ್ಡಗೋಡೆ ಮೇಲೆ ಧೀಪವಿಟ್ಟ ಹೇಳಿಕೆ ನೀಡಿದ್ರು.

ಸ್ವಾಭಿಮಾನಿ ಸಂಸದೆ ಅಂತಲೇ ಹೆಸರು ಗಳಿಸಿರುವ ಸುಮಲತಾ ಅಂಬರೀಶ್ ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಆದ್ರೂ ಪಕ್ಷ ಸೇರ್ಪಡೆ ಸುಮಲತಾರಿಗೆ ಅನಿವಾರ್ಯವಾಗಿದೆ. ಆದ್ರೆ ಸುಮಲತಾ ಮುಂದಿರುವ ಆಯ್ಕೆ ಕೇವಲ ಬಿಜೆಪಿ ಮಾತ್ರ. ಯಾಕೆಂದರೆ ಸುಮಲತಾರನ್ನ ಕಾಂಗ್ರೇಸ್ ಗೆ ಸೇರಿಸಿಕೊಳ್ಳೋದು ಸ್ವತಃ ನಾಯಕರಿಗೆ ಇಷ್ಟವಿಲ್ಲ ಎಂಬುದು ಕಾಂಗ್ರೇಸ್ ವಲಯದಲ್ಲಿ ಕೇಳಿಬರುವ ಮಾತು.

 

Related