ವಿದ್ಯುತ ಕಾಯ್ದೆ ತಿದ್ದುಪಡಿ ವಿರೋಧಿಸಿ, ನೌಕರರಿಂದ ಮುಷ್ಕರ

ವಿದ್ಯುತ ಕಾಯ್ದೆ ತಿದ್ದುಪಡಿ ವಿರೋಧಿಸಿ, ನೌಕರರಿಂದ ಮುಷ್ಕರ

ಗಜೇಂದ್ರಗಡ : ಕೇಂದ್ರ ಸರ್ಕಾರ ವಿರೋಧಿಸಿ ಧೋರಣೆತನ್ನು ಖಂಡಿಸಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಹಾಗೂ ಅಧಿಕಾರಿ  ಸಂಘದಿಂದ ಪ್ರತಿಭಟನೆ ನಡೆಸಿದರು.

ಇಂಧನ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು ವಿದ್ಯುತ್ ವಿತರಣಾ ಕಂಪನಿಗಳ ಸಹಭಾಗಿಗಳಾಗಿರುತ್ತಾರೆ. ವಿತರಣಾ ಕಂಪನಿಗಳಉದ್ಯೋಗಿಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ನಿರಂತರ ವಿದ್ಯುತ್ ಸರಬರಾಜು ಮಾಡುವ ಒತ್ತಡದಲ್ಲಿ ಶ್ರಮಿಸಿದರು.

ಆದರೆ ಕೇಂದ್ರ ಸರ್ಕಾರ ಏಕಾ ಏಕಿ ಇಂತಹ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದೊಂದಿಗೆ ವಿಸ್ತಾರವಾಗಿ ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಹಾಗೂ ಅಧಿಕಾರಿಗಳ ಸಂಘದಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಬಳಿಕ ವಿರೇಶ ರಾಜೂರು ಮಾತನಾಡಿ, ಕೇಂದ್ರ ಸರ್ಕಾರ 2003 ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿ ತರಲು ಉದ್ದೇಶಿಸಿದ್ದು ಹಾಗೂ ವಿತರಣಾ ಕಂಪನಿಗಳೂ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ.

ಈ ಸಂದರ್ಭದಲ್ಲಿ ಟಿ.ಎಸ್.ರಾಜೂರ, ಬಾಬುರಾವ ಸೂರ್ಯವಂಶಿ, ಎಸ್.ಬಿ.ಮಾಮನಿ, ಹೀನಾ ಕೌಜಲಗಿ, ಬಿ.ಬಿ.ಭಜೇಂತ್ರಿ, ಮಹಾಂತೇಶ ಚಿಗರಿ, ಕೆ.ಎಸ್.ಸಾಲಿಮಠ, ಪ್ರಶಾಂತ ಸೂರ್ಯವಂಶಿ, ರಮೇಶ ಮಾಂಡ್ರೆ ಸೇರಿದಂತೆ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ನಲ್ಲಿ  ಸುಮಾರು 50 ಕ್ಕೂ ಹೆಚ್ಚು ಜನರು  ಪ್ರತಿಭಟನೆ ನಡೆಸಿದರು.

Related