ಗುತ್ತಿಗೆ ನೌಕರರ ಸ್ಧಿತಿ ಅಧೋಗತಿ ​

ಗುತ್ತಿಗೆ ನೌಕರರ ಸ್ಧಿತಿ ಅಧೋಗತಿ  ​

ಉಡುಪಿ:  ರಾಜ್ಯದಲ್ಲಿ ಅಲ್ಪ ಸಂಬಳಕ್ಕೆ ಸುಮಾರು 23 ಸಾವಿರಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ದುಡಿಯುವ ಗುತ್ತಿಗೆ, ಹೊರಗುತ್ತಿಗೆ ನೌಕರರು ಗರಿಷ್ಠ ಪ್ರಮಾಣದಲ್ಲಿ ಸೇವೆ ಸಲ್ಲಿಸಿ ಕನಿಷ್ಠ ವೇತನ ಪಡೆಯುತ್ತಿರುವುದು ಸರಕಾರದ ಕಣ್ಣಿಗೆ ಗೋಚರವಾಗುವುದೇ ಇಲ್ಲ.

ಸಂಬಳಕ್ಕಾಗಿ ಅಧಿಕಾರಿಗಳ ಎದುರು ಕೈ ಚಾಚಿ ನಿಲ್ಲುವ ಪರಿಸ್ಧಿತಿ ಇದ್ದು, ಕೆಲವೊಮ್ಮೆ 2-3 ತಿಂಗಳು ಕಳೆದರೂ ಸಂಬಳ ಕೈಸೇರುವುದೇ ಇಲ್ಲ. ದುಡಿಮೆಯನ್ನೇ ನಂಬಿ ಸಾಲ ಮಾಡಿದರೆ ತಿಂಗಳ ಕಂತು ಕಟ್ಟಲು ಪರದಾಡಬೇಕಾಗುತ್ತದೆ. ಭದ್ರತೆ ಇಲ್ಲದ ಹುದ್ದೆಯಲ್ಲಿ ಅಭದ್ರತೆಯಿಂದ ಜೀವನ ಸಾಗಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಮೇಲೆ ಸರಕಾರದ ಮಲತಾಯಿ ಧೋರಣೆ ಖಂಡಿಸುವಂತದ್ದು.

ವಾರಿಯರ್ಸ್ಗಿಲ್ಲ ಗೌರವಧನ : ಕೊರೊನಾ ವೈರಸ್‌ ಹೋಗಲಾಡಿಸಲು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ, ಆಶಾ ಕಾರ್ಯಕರ್ತರಿಗೆ ನೀಡಿದಂತೆ ಗೌರವಧನ ನೀಡದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Related