ಅಮೆರಿಕಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ಅಮೆರಿಕಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ಅಮೆರಿಕದ ಕ್ಯಾಲಿಫೋರ್ನಿಯಾದ ಉದ್ಯಾನವೊಂದರಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರಲ್ಲಿ ಆಘಾತ ಮೂಡಿಸಿದ್ದು, ಈ ದ್ವೇಷ ಅಪರಾಧದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

6 ಅಡಿ, 650 ಪೌಂಡ್ (294 ಕೆಜಿ) ತೂಕದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯು ಉತ್ತರ ಕ್ಯಾಲಿಫೋರ್ನಿಯಾದ ಸಿಟಿ ಆಫ್ ಡೇವಿಸ್ನ ಸೆಂಟ್ರಲ್ ಪಾರ್ಕ್ ನಲ್ಲಿದ್ದು, ಅದರ ಪಾದದ ಭಾಗಗಳನ್ನು ಕತ್ತರಿಸಲಾಗಿದ್ದು, ಅರ್ಧ ತಲೆ ಕೆತ್ತಿ ವಿರೂಪಗೊಳಿಸಲಾಗಿದೆ. ಮುಖದ ಒಂದು ಭಾಗ ನಾಪತ್ತೆಯಾಗಿದ್ದು, ಪ್ರತಿಮೆ ನಿಲ್ಲಿಸಿದ್ದ ಸ್ಥಳದಿಂದ ಉರುಳಿಬಿದ್ದಿದೆ. ಪ್ರತಿಮೆಯ ಕಾಲುಗಳು ಮಾತ್ರ ಅದನ್ನು ನಿಲ್ಲಿಸಿದ್ದ ಜಾಗದಲ್ಲಿದೆ.

ಜನವರಿ 27ರ ಬೆಳಿಗ್ಗೆ ಪಾರ್ಕ್ ಸಿಬ್ಬಂದಿಯೊಬ್ಬರು ಮಹಾತ್ಮ ಗಾಂಧಿ ಪ್ರತಿಮೆ ಹಾನಿಗೊಂಡಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರತಿಮೆಯನ್ನು ಅಲ್ಲಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತಿದ್ದು, ಅದನ್ನು ಸರಿಪಡಿಸುವವರೆಗೂ ಬೇರೆಡೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related