ರಾಜ್ಯ ಸರ್ಕಾರ ಜನ ವಿರೋಧ ಪ್ರತಿಭಟನೆ

ರಾಜ್ಯ ಸರ್ಕಾರ ಜನ ವಿರೋಧ ಪ್ರತಿಭಟನೆ

ಲಿಂಗಸುಗೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪಟ್ಟಣದಲ್ಲಿ  ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿವತಿಯಿಂದ ಪ್ರತಿಭಟನೆ ಮಾಡಲಾಯಿತ್ತು.

ಕೋವಿಡ್-19 ಸೃಷ್ಟಿಸಿದ ಆರೋಗ್ಯ ಸಮಸ್ಯೆಯು ಆರ್ಥಿಕ ಬಿಕ್ಕಟಾಗಿ ಮಾರ್ಪಟಿದೆ. ಈ  ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ನಿಯಂತ್ರಿಸಲು ವೈಜ್ಞಾನಿಕ ಅಗತ್ಯ ಕ್ರಮಗಳಿಲ್ಲದೆ, ಜನರು ಸಾವು ನೋವುಗಳ ಮಧ್ಯೆ ನಿತ್ಯ ಹೆಣಗಾಡುತ್ತಿರುವುದು ಈ ವ್ಯವಸ್ಥೆಯ ವೈಫಲ್ಯವೇ ಸಾಕ್ಷಿಯಾಗಿದೆ.

ಕಾರ್ಮಿಕ ಕಾನೂನುಗಳು, ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ಸರಕು ಸೇವಾ ಕಾಯ್ದೆ, ನೂತನ ಶಿಕ್ಷಣ ನೀತಿ ಹಾಗು ಮೋಟಾರ್ ವಾಹನ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಕ್ರಮಗಳಿಂದಾಗಿ ದೇಶ ಅಧೋಗತಿಯತ್ತ ಸಾಗುತ್ತಿದೆ.

1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಮೂಲಕ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳಿದ್ದರು, ಇಂದು ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕಿವಿಗೊಡದ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿದೆ. ಕಾರ್ಪೋರೇಟ್ ಸರ್ಕಾರವನ್ನು ಕೆಳಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Related