ಮೈಷುಗರ್ ಕಾರ್ಖಾನೆ ಆರಂಭವಾಗುತ್ತಾ ?

ಮೈಷುಗರ್ ಕಾರ್ಖಾನೆ ಆರಂಭವಾಗುತ್ತಾ ?

ಮಂಡ್ಯ : ಜೂನ್ ಆರಂಭವಾದರೂ ಮೈಷುಗರ್ ಕಾರ್ಖಾನೆ ಆರಂಭವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಿಂದಿನ ವರ್ಷದಂತೆ ಈ ಬಾರಿಯೂ ಅನ್ಯ ಜಿಲ್ಲೆ ಸಕ್ಕರೆ ಕಾರ್ಖಾನೆಗಳ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು ಕಬ್ಬು ಬೆಳೆಗಾರರು ಆತಂಕಗೊ

ಡಿದ್ದಾರೆ.

ಕಾರ್ಖಾನೆ ವ್ಯಾಪ್ತಿಯ 8 ಲಕ್ಷ ಟನ್ಗೂ ಹೆಚ್ಚು ಕಬ್ಬು ಕಟಾವಿಗೆ ಬರುತ್ತಿದ್ದು ಜುಲೈ ಮೊದಲ ವಾರದಲ್ಲಿ ಕಡಿಯಲೇಬೇಕಾಗಿದೆ. ಆದರೆ ಮೈಷುಗರ್ ಕಾರ್ಖಾನೆಗೆ ಪುನಶ್ಚೇತನ ನೀಡಿ, ಕಬ್ಬು ಅರೆಯಲು ಸಿದ್ಧಗೊಳಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ಪ್ರಕಟಿಸಿಲ್ಲ.

ಸರ್ಕಾರವೇ ಕಾರ್ಖಾನೆ ನಡೆಸಬೇಕೋ, ಖಾಸಗೀಕರಣ ಮಾಡಬೇಕೋ, ಕಾರ್ಯಾಚರಣೆ– ನಿರ್ವಹಣೆಗೆ ವಹಿಸಬೇಕೋ ಎಂಬ ಜಿಜ್ಞಾಸೆಯಲ್ಲೇ ಹಲವು ತಿಂಗಳು ಕಳೆದು ಹೋಗಿದ್ದು ರೈತರ ಹಿತ ಕಾಯುವ ಯಾವುದೇ ಕ್ರಮ ಕೈಗೊಂಡಿಲ್ಲ.

ಒAದು ಬಾಯ್ಲರ್ ಕಡಿಮೆ ಎಂದರೂ 20 ವರ್ಷ ಕೆಲಸ ಮಾಡಬೇಕು. ಆದರೆ ಕಳಪೆ ಯಂತ್ರೋಪಕರಣ ಅಳವಡಿಸಿದ್ದು ಅವು ಕಾರ್ಯಾರಂಭವನ್ನೇ ಮಾಡಲಿಲ್ಲ. ರಾಸಾಯನಿಕ ಪ್ರಕ್ರಿಯೆ ಮೂಲಕ ಬಾಯ್ಲರ್ಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಆದರೆ 2018 ಏಪ್ರಿಲ್ ತಿಂಗಳ ನಂತರ ಕಾರ್ಖಾನೆ ಸ್ಥಗಿತಗೊಂಡಿವೆ.

‘ಕಾರ್ಖಾನೆ ಆರಂಭದ ವಿಚಾರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಜುಲೈ ತಿಂಗಳಲ್ಲಿ ಕಾರ್ಖಾನೆ ಕಬ್ಬು ಅರೆಯಲು ಸಾಧ್ಯವೇ ಇಲ್ಲ. ಈ ವರ್ಷವೂ ಸರ್ಕಾರ ನಮಗೆ ಮೋಸ ಮಾಡಿದೆ. ನಾವು ಮತ್ತೊಮ್ಮೆ ಹೊರ ಜಿಲ್ಲೆಯ ಕಾರ್ಖಾನೆಗಳ ಮುಂದೆ ಭಿಕ್ಷೆಗೆ ನಿಲ್ಲಬೇಕಾಗಿದೆ. ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೆ ರೈತನಿಗೆ ಪ್ರತಿ ಟನ್ಗೆ ₹ 1 ಸಾವಿರ ನಷ್ಟವಾಗುತ್ತದೆ’ ಎಂದು ರೈತರಾದ ರಾಮೇಗೌಡ, ಶಂಕರ್ ನೋವು ವ್ಯಕ್ತಪಡಿಸಿದರು.

‘ಕಾರ್ಖಾನೆಯನ್ನು ನಡೆಸಬೇಕು, ರೈತರ ಹಿತ ಕಾಪಾಡಬೇಕು ಎಂಬ ಇಚ್ಛಾಶಕ್ತಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿ ಯಾವು ಜನಪ್ರತಿನಿಧಿಗಳಿಗೂ ಇಲ್ಲ. ಕಳೆದ ಬಾರಿ ಕಬ್ಬು ಪೂರೈಸಿದ ಸಾಗಣೆ ವೆಚ್ಚವನ್ನೂ ಕೊಡಲಿಲ್ಲ. ಬೇಕಾಬಿಟ್ಟಿಯಾಗಿ ಕಬ್ಬು ಮಾರಾಟ ಮಾಡಬೇಕಾಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ರೈತರನ್ನು ಕೊಲ್ಲುತ್ತಿದ್ಧಾರೆ’ ಎಂದು ರೈತಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಆರೋಪಿಸಿದರು.

Related