ಬೋಧಕ ಆಸ್ಪತ್ರೆಯಲ್ಲಿ ಸೇವೆಗಳು ಆರಂಭ

ಬೋಧಕ ಆಸ್ಪತ್ರೆಯಲ್ಲಿ ಸೇವೆಗಳು ಆರಂಭ

ಕೊಪ್ಪಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಸೂಚನೆಯಂತೆ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಹಿಂಭಾಗ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯನ್ನು ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿ ಇನ್ನುಳಿದ ಆರೋಗ್ಯ ಸೇವೆಗಳನ್ನು ಪ್ರತ್ಯೇಕವಾಗಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಸರ್ಕಾರದ ಆದೇಶದಂತೆ ಜಿಲ್ಲಾ ಬೋಧಕ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಡಿಸಿ, ಪರಿವರ್ತಿತ ಜಿಲ್ಲಾ ಆಸ್ಪತ್ರೆಯನ್ನಾಗಿ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯನ್ನು ಪರಿವರ್ತಿಸಲಾಗಿತ್ತು.

ಪ್ರಸ್ತುತ ತಾಯಿ(ಹೆರಿಗೆ) ಹಾಘೂ ಮಕ್ಕಳ ಸೇವೆಗಳನ್ನು ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜಿನಲ್ಲಿಯೇ ಮುಂದುವರೆಸಿ ಇನ್ನುಳಿದ ಆರೋಗ್ಯ ಸೇವೆಗಳಾದ ತುರ್ತು ಚಿಕಿತ್ಸಾ ಗಟಕ, ವೈದ್ಯಕೀಯ ವಿಭಾಗ, ಶಸ್ತçಚಿಕಿತ್ಸಾ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ನೇತ್ರ ವಿಭಾಗ, ಇ.ಎನ್.ಟಿ ವಿಭಾಗ, ಚರ್ಮ ವಿಭಾಗಗಳ ಸೇವೆಯನ್ನು ಜಿಲ್ಲಾ ಬೋಧಕ ಆಸ್ಪತ್ರೆಯ ಮುಂಭಾಗದಲ್ಲಿ ಜೂನ್ 04 ರಿಂದ ಪ್ರಾರಂಭಿಸಲು ಆದೇಶಿಸಿದ್ದು, ಸಾರ್ವಜನಿಕರು ಇದರ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related