ಕೌಶಲ್ಯ ಅಭಿವೃದ್ದಿ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀವಿದ್ಯಾ

ಕೌಶಲ್ಯ ಅಭಿವೃದ್ದಿ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀವಿದ್ಯಾ

ಬೆಂಗಳೂರು, ನ.7: ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀವಿದ್ಯಾರವರನ್ನು ಸರ್ಕಾರ ನೇಮಿಸಿದೆ. ಈಗಾಗಲೇ ನಲ್ಮ್ ಮಿಷನ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀವಿದ್ಯಾರವರನ್ನು, ಸರ್ಕಾರ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಮಂಡಳಿಯ ಹೆಚ್ಚುವರಿಯಾಗಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಆದೇಶವನ್ನು ನೀಡಿದೆ. ಇಲ್ಲಿಯವರೆಗೆ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತದ್ದ ಅಶ್ವಿನಿ. ಎನ್. ದಾನಪ್ಪಗೌಡರವರನ್ನು ವರ್ಗಾಯಿಸಲಾಗಿದೆ.

Related