ಶ್ರೀರಾಮುಲು, ಡಿಸಿಎಂ ಸ್ಥಾನದ ಆಸೆ ಬಹಿರಂಗ

ಶ್ರೀರಾಮುಲು, ಡಿಸಿಎಂ ಸ್ಥಾನದ ಆಸೆ ಬಹಿರಂಗ

ರಾಯಚೂರು : ಈಗಾಗಲೇ ಅನೇಕ ಬಾರಿ ತಾವು ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದ ಸಚಿವ ಬಿ.ಶ್ರೀರಾಮುಲು, ಇದೀಗ ಮತ್ತೆ ನಾನು ಉಪಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ ಎಂಬುದಾಗಿ ತಮ್ಮ ಆಸೆಯನ್ನು ಬಹಿರಂಗವಾಗಿಯೇ ಬಾಯ್ ಬಿಟ್ಟಿದ್ದಾರೆ.

ಮಸ್ಕಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಅರಣ್ಯ ಸಚಿವ ಆನಂದ್ ಸಿಂಗ್ ರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು, ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕು ಎನ್ನುವುದು ಹಲವು ಹೋರಾಟಗಾರರ ಬಹುದಿನದ ಬೇಡಿಕೆಯಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Related