ಘೋಸ್ಟ್ ಮೂವಿಗೆ ಭರ್ಜರಿ ರೆಸ್ಪಾನ್ಸ್

ಘೋಸ್ಟ್ ಮೂವಿಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ಘೋಸ್ಟ್ ಚಿತ್ರ ನೆನ್ನೆ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು 60 ವರ್ಷ ದಾಟಿದರೂ ಸಹ ನಟನೆಯಲ್ಲಿ ಯಾರನ್ನು ಮೀರಿಸಲಾರು ಇಲ್ಲ ಎಂದು ಶಿವಣ್ಣ ನನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ನಟ ಶಿವರಾಜ್​ಕುಮಾರ್ ಅಭಿನಯದ ಘೋಸ್ಟ್ ಹಾಗೂ ತಮಿಳಿನಲ್ಲಿ ವಿಜಯ್ ಅಭಿನಯದ ಲಿಯೋ ಸಿನಿಮಾ ಒಂದೇ ದಿನ ರಿಲೀಸ್ ಆಗಿದೆ. ಎರಡೂ ಸಿನಿಮಾಗಳು ಆಯಾ ಇಂಡಸ್ಟ್ರಿಯಲ್ಲಿ ಭಾರೀ ನಿರೀಕ್ಷಿತ ಸಿನಿಮಾಗಳಾಗಿದ್ದವು.

ಘೋಸ್ಟ್ ಸಿನಿಮಾಗೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಶಿವರಾಜ್​ಕುಮಾರ್ ಅವರ ಮಸ್ತ್ ಆ್ಯಕ್ಷನ್ ನೋಡಿ ಭೇಷ್ ಎಂದಿದ್ದಾರೆ ಪ್ರೇಕ್ಷಕರು. ಡಿಫರೆಂಟ್ ಸ್ಟೋರಿ, ಆ್ಯಕ್ಷನ್ ಕಾಂಬಿನೇಷನ್​ಗೆ ಕನ್ನಡ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಿದ್ದು ಸಕ್ಸಸ್​​ಫುಲ್ ಆಗಿ ರನ್ ಆಗುತ್ತಿದೆ. ಸಿನಿಮಾ ಮೊದಲ ದಿನ 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಘೋಸ್ಟ್ ನೋಡಿದ ಸಿನಿ ಪ್ರಿಯರು ಶಿವಣ್ಣ ಅವರ ಆ್ಯಕ್ಷನ್​ ಸೀನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಯಸ್ಸಿನಲ್ಲಿ ಈ ರೇಂಜ್​ಗೆ ಆ್ಯಕ್ಷನ್ ಮಾಡಿರೋದು ಅಧ್ಬುತ ಎಂದೂ ಹೇಳಿದ್ದಾರೆ. ಅಂತೂ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಕ್ಸಸ್​​ಫುಲ್ ಆಗಿ ರನ್ ಆಗುತ್ತಿದ್ದು ಎಲ್ಲರಿಂದ ಮೆಚ್ಚುಗೆ ಪಡೆದಿದೆ.

 

Related