ಮಗನೇ ನೀನೇ ನನ್ನ ಪ್ರಪಂಚ

ಮಗನೇ ನೀನೇ ನನ್ನ ಪ್ರಪಂಚ

ಸ್ಯಾಂಡಲ್‌ವುಡ್ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾನಿಗೆ ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ.

2020ರ ಅಕ್ಟೋಬರ್ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜನಿಸಿದ್ದ ರಾಯನ್ ರಾಜ್ ಸರ್ಜಾಗೆ ಒಂದು ವರ್ಷ ತುಂಬಿದೆ. 2017ರ ಅಕ್ಟೋಬರ್ 22ರಂದು ಚಿರು ಮತ್ತು ಮೇಘನಾರ ಮದುವೆ ನಿಶ್ಚಿತಾರ್ಥ ನಡೆದಿತ್ತು. ಅಪ್ಪ-ಅಮ್ಮನ ನಿಶ್ಚಿತಾರ್ಥದ ದಿನವೇ ಜೂನಿಯರ್ ಚಿರು ಆಗಮಿಸಿದ್ದು, ಸರ್ಜಾ ಮತ್ತು ಸುದರ್ ರಾಜ್ ಕುಟುಂಬದಲ್ಲಿ ಖುಷಿಯ ಹೂರಣ ಉಣಬಡಿಸುತ್ತಿದ್ದಾರೆ.

ಮಗನ ಹುಟ್ಟುಹಬ್ಬ ಸುಸಂದರ್ಭದಲ್ಲಿ ಮಗನೊಂದಿಗೆ ತಾನಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಮೇಘನಾ, ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ ಚಿರು ನಮ್ಮ ರಾಜಕುಮಾರನಿಗೆ ಈಗ ಒಂದು ವರ್ಷ ಮಗನೇ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಪ್ರತಿಕ್ಷಣವೂ ಈ ನಿನ್ನ ಅಮ್ಮನ ಪ್ರೀತಿಯ ಅಪ್ಪುಗೆಯಲ್ಲೇ ಇರಬೇಕು ಎಂದು ಬಯಸುವೆ. ಹ್ಯಾಪಿ ಬರ್ತ್ ಡೇ ರಾಯಣ್ಣ ಅಪ್ಪ-ಅಮ್ಮನ ಪ್ರೀತಿ ಸದಾ ನಿನ್ನನ್ನು ಕಾಯಲಿದೆ. ಐ ಲವ್ ಯೂ ಕಂದ ಎಂದು ಬರೆದುಕೊಂಡಿದ್ದಾರೆ.

ಚಿರು ಮತ್ತು ಮೇಘನಾ ಇಬ್ಬರೂ 2018ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ದುಃಖದ ನಡುವಿನಲ್ಲೇ ಇದ್ದ ಎರಡೂ ಕುಟುಂಬಕ್ಕೀಗ ಜೂ.ಚಿರು ಖುಷಿಯ ಬುತ್ತಿ ತಂದಿದ್ದಾನೆ.

Related