ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ..!!

ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ..!!

’ಕಸದಿಂದ ರಸ’ ಎಂಬ ಗಾದೆಮಾತನ್ನು ಹೇಳಲಷ್ಟೆ ಚೆಂದ. ಆದರೆ ಅದನ್ನು ನೀವು ಮಹಾನಗರಗಳಿಗೆ ಅನ್ವಯಿಸಲು ಸಾಧ್ಯವಿಲ್ಲದಂತಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಎಂಬುದು ಬಗೆಹರಿಯದ ಸಮಸ್ಯೆಯಾಗಿದೆ. ಅಲ್ಲದೆ ಅದೊಂದು ದೊಡ್ಡ ಮಾಫಿಯಾವಾಗಿ ಬೆಳೆದಿದೆ ಕೂಡ. ಕಸ ಸಂಗ್ರಹಿಸಿ ನಗರವನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರಿಗೂ ಅವರ ನ್ಯಾಯಯುತ ಹಕ್ಕುಗಳು ಸಿಕ್ಕಿಲ್ಲ. ಹಾಗಾಗಿಯೇ ಬೆಂಗಳೂರು ಪೌರಕಾರ್ಮಿಕರ ಸಂಘವು AICCTU ಸಂಘಟನೆಯ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ಧರಣಿ ನಡೆಸಿತ್ತು. ದಿಟ್ಟ ಹೋರಾಟಕ್ಕೆ ಬಗ್ಗಿದ ಸರ್ಕಾರ ಕಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಭರವಸೆ ನೀಡಿದೆ. ಆ ಭರವಸೆ ಜಾರಿಯಾಗಬೇಕಾದರೆ ಪೌರಕಾರ್ಮಿಕರ ಪಾಲಿಗೆ ಶಾಪವಾಗಿರುವ, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಗುತ್ತಿಗೆ ಪದ್ಧತಿ ನಾಶವಾಗಬೇಕಿದೆ. ಒಂದರ್ಥದಲ್ಲಿ ಇಡೀ ಸಮಸ್ಯೆಗೆ ಕಾರಣವಾಗಿರುವ ಕಂಟ್ರಾಕ್ಟರ್ ಲಾಬಿ ಎಂದು ಕರೆಯಲ್ಪಡುವ ಈ ಗುತ್ತಿಗೆ ಪದ್ಧತಿಯ ಆಳ ಅಗಲವನ್ನು ಅರಿತಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಬಹುದಾಗಿದೆ.

ನಗರ ಪಟ್ಟಣಗಳಲ್ಲಿನ ಸ್ವಚ್ಛತೆ ಮತ್ತು ಕಸ ವಿಲೇವಾರಿಯು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. 20 ವರ್ಷಗಳಿಗೂ ಮೊದಲು ಎಲ್ಲೆಡೆ ಕಸ ಗುಡಿಸುವುದು ಮಾತ್ರ ಇತ್ತು. ಅವರನ್ನು ಪೌರಕಾರ್ಮಿಕರು ಎನ್ನುತ್ತಿದ್ದೆವು. ಕಾಂಟ್ರಾಕ್ಟರ್ ಒಬ್ಬನಿಗೆ ಇಂತಿಷ್ಟು ವಾರ್ಡ್‌ಗಳನ್ನು ಗುತ್ತಿಗೆಗೆ ನೀಡಲಾಯಿತು. ಆತ ಒಂದಷ್ಟು ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು. ಆಗ ಕಾಂಟ್ರಾಕ್ಟರ್‌ಗೂ ಬಿಬಿಎಂಪಿಗೂ ಸಂಬಂಧವಿತ್ತೇ ಹೊರತು ಕಾರ್ಮಿಕರಿಗೂ ಬಿಬಿಎಂಪಿಗೆ ನೇರ ಕೊಂಡಿಯಿರಲಿಲ್ಲ. ಹೀಗೆ ಒಂದು ಕಡೆ ಬಿಬಿಎಂಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಹೋದರೆ ಮತ್ತೊಂದೆಡೆ ಮೆನ್ ಮೆಟಿರಿಯಲ್ ಸರ್ವೀಸ್ ನೀಡುವ ಗುತ್ತಿಗೆ ಪಡೆದ ಕಾಂಟ್ರಾಕ್ಟರ್‌ಗಳು ನಿಧಾನಕ್ಕೆ ಬಲಗೊಳ್ಳುತ್ತಾ ಹೋದರು.

ಈ ಕಾಂಟ್ರಾಕ್ಟರ್‌ಗಳು ಒಂದು ವಾರ್ಡಿಗೆ ಕೆಲವರಂತೆ ಮೇಸ್ತ್ರಿಗಳನ್ನು ನೇಮಿಸಿಕೊಳ್ಳುತ್ತಾರೆ. ಅವರ ಕೈಕೆಳಗೆ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರ್ಯಾಕ್ಟರ್ ಲಾರಿ ಅಥವಾ ಆಟೋಗಳಿಗೆ ತುಂಬುವ ಲೋಡರ್ಸ್, ಕಸ ಸಾಗಿಸುವ ಚಾಲಕರು, ಒಳಚರಂಡಿಗಳಲ್ಲಿ ಕಟ್ಟಿಕೊಂಡ ಮಲಮೂತ್ರಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವವ ಯುಜಿಡಿ ವರ್ಕರ್ಸ್ ಹೀಗೆ ಹಲವು ವಿಧದ ಪೌರಕಾರ್ಮಿಕರಿದ್ದಾರೆ. ಇವರೆಲ್ಲರೂ ಹಲವು ಹಂತಗಳಲ್ಲಿ ಶೋಷಣೆಗೆ ಒಳಗಾದವರೆ ಆಗಿದ್ದರು. ಇವರೆಲ್ಲರಿಗೂ ಗುತ್ತಿಗೆದಾರ ಸಂಬಳ ನೀಡುತ್ತಿದ್ದ. ಆತ ಕೊಟ್ಟಷ್ಟೆ ಸಂಬಳ. ಅಲ್ಲಿ ಯಾವುದೇ ಕಾರ್ಮಿಕ ಕಾಯ್ದೆಗಳು, ಹಕ್ಕುಗಳು ಅನ್ವಯಿಸುವುದಿಲ್ಲ. ಯಾರಾದರೂ ಯಾಕಿಷ್ಟು ಸಂಬಳ ಎಂದು ಪ್ರಶ್ನಿಸಿದರೆ ಅವರನ್ನು ಮನೆಗೆ ಕಳಿಸಲಾಗುತ್ತಿತ್ತು. ಈ ರೀತಿಯಾಗಿ ಕಾಂಟ್ರಾಕ್ಟರ್‌ಗಳು ತಿಂದು ತೇಗುತ್ತಿದ್ದರೆ

 

Related