ಸಾಬೂನು ತಿನ್ನಿಸಿದ ಯೂಟ್ಯೂಬರ್!

ಸಾಬೂನು ತಿನ್ನಿಸಿದ ಯೂಟ್ಯೂಬರ್!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಅಂತಾ ಅನೇಕರು ಜೀವ ಪಣಕ್ಕಿಡೋಕೆ ಬೇಕಿದ್ದರೂ ತಯಾರಾಗಿ ಬಿಡ್ತಾರೆ. ಇಲ್ಲವೇ ಇನ್ನೊಬ್ಬರ ಜೀವಕ್ಕಾದರೂ ತೊಂದರೆ ಕೊಟ್ಟು ಬಿಡ್ತಾರೆ.

ಈ ಮಾತಿಗೆ ಪುರಾವೆ ಎಂಬಂತೆ  ಕೊಲಂಬಿಯಾದ ಯುಟ್ಯೂಬರ್ ಒಬ್ಬ ನಿರಾಶ್ರಿತರಿಗೆ ಐಸ್‌ಕ್ರೀಮ್ ಎಂದು ಸುಳ್ಳು ಹೇಳಿ ಸೋಪನ್ನ ತಿನ್ನಿಸಿ ಅದನ್ನ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ಹಾಗೂ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರು ಯು ಟ್ಯೂಬರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯುಟ್ಯೂಬರ್ ಹಾಗೂ ಈ ಕೃತ್ಯದಲ್ಲಿ ಆತನಿಗೆ ಸಾಥ್ ನೀಡಿದ ಇನ್ನೂ ಇಬ್ಬರು ಗಂಭೀರ ಪರಿಣಾಮ ಎದುರಿಸಲಿದ್ದಾರೆ ಎಂದು ಹೇಳಿದ್ರು. ಇನ್ನು ಈ ಕೃತ್ಯದಲ್ಲಿ ಭಾಗಿಯಾದವರಲ್ಲಿ ಒಬ್ಬನನ್ನ ಡಿಲಾನ್ ಎಂದು ಗುರುತಿಸಲಾಗಿದ್ದು ಈ ಕೃತ್ಯ ಎಸಗಿದದ್ದಕ್ಕೆ 324 ಡಾಲರ್ ದಂಡ ವಿಧಿಸಲಾಗಿದೆ.

Related