ಮದುವೆ ದಿನ ವಧು ವರರು ಹೂವಿನ ಹಾರದ ಬದಲಾಗಿ ಹಾವನ್ನು ಪರಸ್ಪರರ ಕುತ್ತಿಗೆಗೆ ಹಾಕಿದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮದ್ವೆ ದಿನ ಗಂಡು ಹೆಣ್ಣು ಪರಸ್ಪರ ಹಾರ ಬದಲಾಯಿಸುವುದನ್ನು ನೋಡಿದ್ದೇವೆ. ಆದರೆ ಹೂವಿನ ಹಾರದ ಬದಲು ಹಾವನ್ನೇ ಹಾರವಾಗಿಸಿದ್ದನ್ನು ಎಲ್ಲಾದರು ನೋಡಿದ್ದೀರಾ? ವಿಚಿತ್ರ ಎನಿಸಿದರು ಮಹಾರಾಷ್ಟ್ರದಲ್ಲಿ ಇಂತಹ ಘಟನೆಯೊಂದು ನಡೆದಿದೆ. ವಧು ವರರು ಹಾವನ್ನೇ ಹಾರವಾಗಿಸಿದ್ದಾರೆ. ಸಾಮಾನ್ಯವಾಗಿ ಹಾವು ಎಂದರೆ ಭಯಬಿದ್ದು ದೂರು ಓಡೋಗೋದೆ ಜಾಸ್ತಿ ಅಂತಹದ್ದರಲ್ಲಿ ಈ ಜೋಡಿ ಹಾವನ್ನೇ ಪರಸ್ಪರರ ಕೊರಳಿಗೆ ಹಾಕಿದ್ದನ್ನು ನೋಡಿ ಜನ ದಂಗಾಗಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ ದಂಪತಿಗಳು ಬಿಳಿ ಬಟ್ಟೆಗಳನ್ನು ಧರಿಸಿ, ಪರಸ್ಪರರ ಕುತ್ತಿಗೆಗೆ ಹಾವುಗಳನ್ನು ಹಾಕುತ್ತಾರೆ. ಅಲ್ಲದೇ ವಧುವಾಗಲಿ ವರನಾಗಲಿ ಹಾವನ್ನು ಕಂಡು ಹೆದರುವುದಿಲ್ಲ. ವಧು ಮೊದಲು ವರನ ಕುತ್ತಿಗೆಗೆ ದೊಡ್ಡ ಹಾವನ್ನು ಹಾಕುತ್ತಾಳೆ. ನಂತರ ವರನ ಸರದಿ ಬಂದಾಗ, ಅವನು ದೊಡ್ಡ ಹೆಬ್ಬಾವನ್ನು ತಂದು ವಧುವಿನ ಕುತ್ತಿಗೆಗೆ ಹಾಕುತ್ತಾನೆ. ಅದರ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಾರೆ.
ಈ ಮದುವೆಯಲ್ಲಿ ಪಾಲ್ಗೊಳ್ಳಲು ಅಪಾರ ಜನಸ್ತೋಮವೇ ನೆರೆದಿತ್ತು. ಗಮನಾರ್ಹ ವಿಚಾರ ಎಂದರೆ ಇಬ್ಬರು ಸ್ಥಳೀಯ ವನ್ಯಜೀವಿ ಇಲಾಖೆ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಅವರು ರಾಜ್ಯದ ದೂರದ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ.