ಸ್ಮಾರ್ಟ್ ಸಿಟಿ ಯೋಜನೆ: ಪಾದಚಾರಿ ಮಾರ್ಗದಲ್ಲಿ ಕಳೆಪೆ ಕಾಮಾಗರಿ!

ಸ್ಮಾರ್ಟ್ ಸಿಟಿ ಯೋಜನೆ: ಪಾದಚಾರಿ ಮಾರ್ಗದಲ್ಲಿ ಕಳೆಪೆ ಕಾಮಾಗರಿ!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯು ಒಂದು.

ಈ ಯೋಜನೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಿರ್ಮಾಣ ಮಾಡಿರುವ ಪಾದಚಾರಿ ಮಾರ್ಗಗಳು ಕಳೆಪೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರೆಸಿಡೆನ್ಸಿ ರಸ್ತೆ, ರಿಚ್ಮಂಡ ರಸ್ತೆ, ಕಸ್ತೂರಿ ಬಾ ರಸ್ತೆ, ಅಲಿ ಅಸ್ಕರ್ ರಸ್ತೆ, ಕಾಮರಾಜ್ ರಸ್ತೆ, ಎಮ್.ಜಿ. ರಸ್ತೆ, ಬೋರಿಂಗ್ ರಸ್ತೆ, ಕಮರ್ಷಿಯಲ್ ರಸ್ತೆ, ಸೆಂಟ್ ಜಾನ್ಸ್ ರಸ್ತೆ, ಕ್ವಿನ್ಸ್ ರಸ್ತೆ, ಹಲಸೂರ ರಸ್ತೆ, ಡಿಕನ್ಸನ್ ರಸ್ತೆ, ಇನ್ನು ಮುಂತಾದ ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಗುಂಡಿಗಳು ಬಿದ್ದು ಆ ಗುಂಡಿಗಳಲ್ಲಿಅಮಾಯಕ ಪಾದಚಾರಿಗಳು ಬಿದ್ದು ಕಾಲು ಕೈ ಮುರಿದುಕೊಂಡು ಪ್ರಾಣ ಹಾನಿ ಮಾಡಿಕೊಂಡಿರುವ ಉದಾಹರಣೆಗಳು ಇವೆ.

ಪಾದಚಾರಿ ಮಾರ್ಗಗಳಲ್ಲಿ ಬಳಸಿರುವ ಜಲ್ಲಿಕಲ್ಲು, ಸಿಮೆಂಟ್ ಬ್ರಿಕ್ಸ, ಟೈಲ್ಸ್ ಗಳು ಕಿತ್ತು ಹಾಳಾಗಿವೆ. ಇದರಿಂದ ಪಾದಚಾರಿಗಳು ಎಡವಿ ಬೀದ್ದಿರುವ ಪ್ರಕರಣಗಳು ಇವೆ.

ಈ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಅವೈಜ್ಞಾನಿಕ ರೀತಿಯ ಬೇಕಾಬಿಟ್ಟಿ ಕೆಲಸಗಳನ್ನು ಮಾಡಿರುವುದು ಕಾಣಬವುದು. ಕಾಲ ಕ್ರಮೇಣವಾಗಿ ಸ್ಮಾರ್ಟ್ ಸಿಟಿ ಯೋಜನೆಯ ತಾಂತ್ರಿಕ ಅಧಿಕಾರಿಗಳು ಪರಿಶೀಲನೆ ಮಾಡಿ ಪಾದಚಾರಿ ಮಾರ್ಗಗಳಲ್ಲಿ ಆಗಿರುವ ಕಾಮಾಗಾರಿಗಳನ್ನು ಸರಿಪಡಿಸಬೇಕಾದ ಕರ್ತವ್ಯ ಅವರದ್ದಾಗಿದ್ದರು, ಗುತ್ತಿಗೆದರರ ಜೊತೆ ಶಾಮಿಲಾಗಿ ಕಳಪೆ ಕಾಮಾಗಾರಿಯು ಮಾಡಿರಬಹುದು ಎಂಬುದು ತಿಳಿಯುತ್ತದೆ. ಇದರ ಬಗ್ಗೆ ಹಲವು ಜನಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರು ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ಕೂಡಲೇ ಉನ್ನತ ಮಟ್ಟದ ತಾಂತ್ರಿಕ ಅಧಿಕಾರಿಗಳು ಪಾದಚಾರಿ ಮಾರ್ಗಗಳ ಗುಣಮಟ್ಟ, ಮತ್ತು ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ  ಜರುಗಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.

ವರದಿ: ಸ್ವಾಮಿ ಕಾರಿಗನೂರು

Related