ನಶೆಯಲ್ಲಿ ಎಸಿಪಿಯಿಂದ ಪೇದೆಗೆ ಕಪಾಳಮೋಕ್ಷ

ನಶೆಯಲ್ಲಿ ಎಸಿಪಿಯಿಂದ ಪೇದೆಗೆ ಕಪಾಳಮೋಕ್ಷ

ಹುಬ್ಬಳ್ಳಿ : ಅಕ್ರಮ ಮರಳು ಸಾಗಾಟ ಹಾಗೂ ಮರಳು ತುಂಬಿದ ಲಾರಿಗಳು ಮಹಾನಗರದಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಓಡಾಡುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸುವಂತೆ ಪೊಲೀಸ್ ಆಯುಕ್ತ ಲಾಬೂರಾಮಸಿಂಗ್ ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು.

ಪೊಲೀಸ್ ಆಯುಕ್ತರ ನಿರ್ದೇಶನದಂತೆ ಇಲಾಖೆಯ ಸಿಬ್ಬಂದಿ ಮರಳು ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದರು. ಇದರಿಂದ ಕುಪಿತಗೊಂಡ ಸಂಚಾರಿ ವಿಭಾಗದ ಎಸಿಪಿ ಎಂ.ಎಸ್ ಹೊಸಮನಿ ಶುಕ್ರವಾರ ರಾತ್ರಿ ಮದ್ಯದ ನಶೆಯಲ್ಲಿ ನೈಟ್ ರೌಂಡ್ಸನಲ್ಲಿದ್ದ ವೇಳೆ ದಕ್ಷಿಣ ಸಂಚಾರಿ ಠಾಣೆಯ ಪೇದೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದೇ ವೇಳೆ ಠಾಣೆಯಲ್ಲಿದ್ದ ಎಎಸ್‌ಐ ಜೊತೆಗೂ ಗಲಾಟೆ ಮಾಡಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿ, ಎಎಸ್‌ಐ ಜೊತೆ ರಂಪಾಟ ಮಾಡಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ದ್ಯಶ್ಯಾವಳಿಗಳು ಈಗ ಹೆಚ್ಚೆಚ್ಚು ವೈರಲ್ ಆಗುತ್ತಿದೆ.

ಎಸಿಪಿ ಎಂ.ಎಸ್ ಹೊಸಮನಿ ಪೇದೆ ಮೇಲೆ ಕಪಾಳ ಮೋಕ್ಷ ಮಾಡಿರುವ ದೃಶ್ಯಗಳು ಪೊಲೀಸ್ ಆಯುಕ್ತರವರೆಗೂ ತಲುಪಿದೆ. ಎಸಿಪಿ ಎಂ.ಎಸ್ ಹೊಸಮನಿ ಕಪಾಳಮೋಕ್ಷ ಮಾಡಿದ ಬಗ್ಗೆ ಇದೀಗ ಇಲಾಖಾ ವಿಚಾರಣೆ ಆರಂಭಿಸಿದೆ.

Related