ಕಚ್ಚಾ ಬಾದಾಮ್ ಹಾಡಿನ ಗಾಯಕನಿಗೆ ರೈಲ್ವೆನಲ್ಲಿ ಮೇನೇಜರ್ ಹುದ್ದೆ..!

ಪಶ್ಚಿಮ ಬಂಗಾಳದ ಗಾಯಕ ಬುಬನ್ಬದ್ಯಾಕರ್ನ ‘ಕಚ್ಚಾ ಬಾದಾಮ್’ (Bhuban Badyakar) ಹಾಡು ರಾತ್ರೋರಾತ್ರಿ ವಿಶ್ವವಿಖ್ಯಾತಿ ಗಳಿಸಿತ್ತು. ಕಡಲೆಕಾಯಿ ಮಾರುತ್ತಿದ್ದ ಆತನಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮ್ಯಾನೇಜರ್ಹುದ್ದೆ (Indian Railways) ನೀಡಲಾಗಿದೆ ಎನ್ನುವ ಸುದ್ದಿ ಓಡಾಡುತ್ತಿದೆ. ಅದರ ಜೊತೆ ಇರುವ ವಿಡಿಯೋದಲ್ಲಿ ಬುಬನ್ವಾಕಿಟಾಕಿ ಹಿಡಿದು ರೈಲಿನ ಬೋಗಿಯೊಂದರಲ್ಲಿ ನಿಂತಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಬಿಳಿ ಸಮವಸ್ತ್ರ ಧರಿಸಿದ್ದಾರೆ.

ಆದರೆ ವಿಡಿಯೋ ಅಸಲಿಯತ್ತನ್ನು ಪರೀಕ್ಷಿಸಿದಾಗ ಸಿಕ್ಕ ಮಾಹಿತಿಯೇ ಬೇರೆಯಾಗಿದೆ. ವಿಡಿಯೋದಲ್ಲಿ ಇರುವುದು ಬುಬನ್ಅಲ್ಲ, ಅವರನ್ನು ಹೋಲುವ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವ್ಯಕ್ತಿ. ಬುಬನ್ಅವರನ್ನು ರೈಲ್ವೆ ಇಲಾಖೆಯು ಕೆಲಸಕ್ಕೆ ನೇಮಿಸಿಕೊಂಡಿಲ್ಲ. ಅಲ್ಲದೆ ಈ ವಿಡಿಯೋವನ್ನು ‘ಡೈಲಿ ಟ್ರಾವೆಲ್ ಹ್ಯಾಕ್’ ಎನ್ನುವ ವ್ಲಾಗ್ನಡೆಸುವ ಬಿಹಾರ ಮೂಲದ ಧನಂಜಯ್ಕುಮಾರ್ಅವರು ಚಿತ್ರೀಕರಿಸಿದ್ದಾರೆ.

Related