ಮದುವೆ ಆಗುವುದಾಗಿ ತಮಿಳು ನಟ ಸಿಂಬು ಮನೆ ಮುಂದೆ ಕೂತಿದ್ದ ಸಿರಿಯಲ್ ನಟಿ..!!

  • In Cinema
  • May 26, 2022
  • 277 Views
ಮದುವೆ ಆಗುವುದಾಗಿ ತಮಿಳು ನಟ ಸಿಂಬು ಮನೆ ಮುಂದೆ ಕೂತಿದ್ದ ಸಿರಿಯಲ್ ನಟಿ..!!

ತಮಿಳಿನ ಖ್ಯಾತ ನಟ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ಸ್ಪೋಟಕ ಸುದ್ದಿಗಳು ಬರುತ್ತಲೇ ಇರುತ್ತವೆ. ಸಿಂಬು ಮದುವೆಯಾಗಲು ಸಾವಿರಾರು ಹುಡುಗಿಯರು ಸಾಲಲ್ಲಿ ನಿಂತಿದ್ದಾರೆ. ನಿಮ್ಮ ಬಾಳಸಂಗಾತಿ ಹೇಗಿರಬೇಕು ಎಂದು ತಮಿಳು ಹುಡುಗಿಯರನ್ನು ಕೇಳಿ ನೋಡಿ, ಅವರು ಹೇಳುವ  ಒಂದೇ ಒಂದು ಹೆಸರು ‘ಸಿಂಬು’.

ಇಂತಹ ಸಿಂಬುವನ್ನು ವರಿಸುವುದಕ್ಕಾಗಿ ಸಾಮಾನ್ಯ ಹುಡುಗಿಯರು ಮಾತ್ರವಲ್ಲ, ಸಿಲೆಬ್ರಿಟಿಗಳು ಮತ್ತು ಕಿರುತೆರೆಯ ಜನಪ್ರಿಯ ನಟಿಯರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿಯೇ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ತಮಿಳು ಸಿನಿಮಾ ರಂಗದಲ್ಲಿ ಬ್ರೇಕಿಂಗ್ ಸುದ್ದಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂಥದ್ದೊಂದು ತಾಜಾ ಸುದ್ದಿ ನಿನ್ನೆ ರಾತ್ರಿ ಸಿಕ್ಕಿದೆ.

ಶ್ರೀನಿಧಿ ಅವರು ಸಿಂಬು ಮನೆ ಮುಂದೆ ಬರುವುದಕ್ಕೆ ಕಾರಣವೂ ಇದೆ. ಈಕೆ ಸಿಂಬು ಅಪ್ಪಟ ಅಭಿಮಾನಿ. ಈ ಹಿಂದೆ ತಾವು ಮದುವೆ ಆಗುವುದಾದರೆ, ಸಿಂಬು ಅವರನ್ನೇ ಆಗುವುದಕ್ಕೆ ಹೇಳಿಕೆ ನೀಡಿದ್ದರು. ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇದೀಗ ಅದೇ ಹುಡುಗಿಯೇ ಸಿಂಬು ಮನೆ ಮುಂದೆ ಕೂತಿದ್ದಾರೆ. ಕೊನೆಗೆ ಅವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಲಾಗಿದೆ.

Related