ಭಾವಿನಾಗೆ ಬೆಳ್ಳಿ ಪದಕ

  • In Sports
  • August 29, 2021
  • 439 Views
ಭಾವಿನಾಗೆ ಬೆಳ್ಳಿ ಪದಕ

ಟೋಕಿಯೊ: ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್ ಐತಿಹಾಸಿಕ ಸಾಧನೆ ಮಾಡಿ, ಎರಡನೇ ಮಹಿಳಾ ಪ್ಯಾರಾ ಕ್ರೀಡಾಪಟು ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಐದು ವರ್ಷಗಳ ಹಿಂದೆ ದೀಪಾ ಮಲಿಕ್, ಪ್ಯಾರಾಂಲಿಪಿಕ್ಸ್ ಆಟದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾ ಕ್ರೀಡಾಪಟು ಎನಿಸಿದ್ದರು.

ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್ ಹಣಾಹಣಿಯಲ್ಲಿ ಚೀನಾದ ನಂ.1 ಆಟಗಾರ್ತಿ  ಯಿಂಗ್ ಜೌ ವಿರುದ್ಧ 7-11 5-11 6-11ರಲ್ಲಿ ಪರಾಭವಗೊಂಡರು. 19 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಚೀನಾದ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಸೋಲು ಅನುಭವಿಸಿದರು ಬೆಳ್ಳಿ ಪದಕ ಪಡೆದುಕೊಂಡರು.

Related