ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್ ಲೋಕಾರ್ಪಣೆ

ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್  ಲೋಕಾರ್ಪಣೆ

ಬೆಂಗಳೂರು:   ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಭಾಷ್ ನಗರದಲ್ಲಿನ “ರಾಜೀವ್ ಗಾಂಧಿ ರವರ ಕಂಚಿನ ಪ್ರತಿಮೆ ಮತ್ತು ಸಮಗ್ರ ಜಂಕ್ಷನ್ ಅಭಿವೃದ್ಧಿ” ಹಾಗೂ “ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್” ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಲೋಕಾರ್ಪಣೆಗೊಳಿಸುವರು.
ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್(ಎರಡನೇ ಹಂತದ) ಓಕಳೀಪುರಂ ಜಂಕ್ಷನ್‌ನಿಂದ ಫೌಂಟೇನ್ ವೃತ್ತದವರೆಗಿನ ಈ ಯೋಜನೆಯು ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ನಗರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿದ್ದು, ಬೆಂಗಳೂರು ನಗರದ ಕೇಂದ್ರ ಭಾಗದ ಗಾಂಧಿನಗರ, ಮೆಜೆಸ್ಟಿಕ್, ಬೆಂಗಳೂರು ನಗರ ರೈಲ್ವೇ ನಿಲ್ದಾಣ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆ ಹೀಗೆಬೆಂಗಳೂರು ನಗರಕ್ಕೆ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶವಾಗಿರುತ್ತದೆ ಹಾಗೂ ಪ್ರಮುಖ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳ ನಡುವಿನ ಏಕೈಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
ರೈಲ್ವೇ ನಿಲ್ದಾಣದಿಂದ ಮಲ್ಲೇಶ್ವರಂ ಹಾಗೂ ಮೆಜೆಸ್ಟಿಕ್ ಕಡೆಗೆ ಸಂಚರಿಸಲು ಪಾಲಿಕೆ ವತಿಯಿಂದ ನಿರ್ಮಿಸಿದ ಮೇಲೇತುವೆ, ಮಲ್ಲೇಶ್ವರಂನಿಂದ ರಾಜಾಜಿನಗರ ಕಡೆಗೆ ಸಂಚರಿಸಲು ಪಾಲಿಕೆ ವತಿಯಿಂದ ನಿರ್ಮಿಸಿದ ಕೆಳಸೇತುವೆ ಮತ್ತು ಚೆನ್ನೈ ಹಾಗೂ ತುಮಕೂರು ಹಳಿಗಳ ಕೆಳಗೆ ರೈಲ್ವೇ ಇಲಾಖೆ ವತಿಯಿಂದ ನಿರ್ಮಿಸಿದ 5 ಕೆಳಸೇತುವೆಗಳು ಮೊದಲ ಹಂತದ ಲೋಕಾರ್ಪಣೆಗೊಳ್ಳಲಿವೆ.

Related