13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಜ್ಞಾನ ಇಲ್ವಾ: ಆರ್ ಅಶೋಕ್

13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಜ್ಞಾನ ಇಲ್ವಾ: ಆರ್ ಅಶೋಕ್

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ 5 ಗ್ಯಾರಂಟಿಗಳನ್ನು ಪೂರೈಸುತ್ತೇನೆಂದಿದ್ದ ಕಾಂಗ್ರೆಸ್ ಸರ್ಕಾರ 224 ಗಂಟೆಗಳ ಆದರೂ ಯಾವ ಗ್ಯಾರಂಟಿಗಳನ್ನು ಪೂರೈಸದಿರುವ ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆಯ ಮುಂಚೆ ಎಲ್ಲಾ ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಗಳನ್ನು ಹಂಚಿದ್ದಾರೆ. ಸರಕಾರ ಬಂದು ಈಗಾಗಲೇ 224 ಗಂಟೆ ಕಳೆದರೂ ಇನ್ನೂ ಕಾಂಗ್ರೆಸ್ ನವರು ಗ್ಯಾರಂಟಿ ಘೋಷಣೆ ಮಾಡಲು ಮೀನಮೇಶ ಮಾಡುತ್ತಿದ್ದಾರೆ.

ಇನ್ನು 13 ಬಜೆಟ್ ಮಂಡನೆ ಮಾಡಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನ ಇಲ್ವಾ? ರಾಜ್ಯದಲ್ಲಿ ಎಷ್ಟು ಜನ ಬಿಪಿಎಲ್ ಕಾರ್ಡ್ ನವರಿದ್ದಾರೆ, ಎಷ್ಟು ಜನ ಯುವಕರಿದ್ದಾರೆ, ಎಷ್ಟು ಜನ ನಿರುದ್ಯೋಗಿಗಳಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ ಎಂದು ಆರ್ ಅಶೋಕ್ ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್ ಧಮ್ ಇದ್ರೆ, ಬಜರಂಗ ದಳ ಆಗಲಿ ಆಥವಾ ಒಂದು ಆರ್​ಎಸ್​ಎಸ್​ ಶಾಖೆಯನ್ನು ಬ್ಯಾನ್ ಮಾಡಿ ಎಂದು ಆರ್ ಅಶೋಕ್ ಗುಡುಗಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಐದು ಉಚಿತ ಗ್ಯಾರಂಟಿಗಳನ್ನು ಕೊಡಮಾಡಲಿದೆ. ದಯವಿಟ್ಟು ಕಾಂಗ್ರೆಸ್​​​ನವರು ಹೇಳಿದ್ದನ್ನು ಜನರು ಫಾಲೋ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟ ಸಭೆಯೂ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ವತಃ ಹೇಳಿದಂತೆಯೇ ಯಾರೊಬ್ಬರೂ ಕರೆಂಟ್ ಬಿಲ್ ಕಟ್ಟಬೇಡಿ.

ಅತ್ತೆ, ತಾಯಿ, ಮಾವನ ಮನೆಗೆ, ದೇವಸ್ಥಾನಕ್ಕೆ ಹೋಗಲು ಬಸ್ ಫ್ರೀ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ  ಈವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಗ್ಯಾರಂಟಿ ಘೋಷಣೆ ಮಾಡುವಾಗ ಯೋಚನೆ ಮಾಡಿರಲಿಲ್ಲವಾ ಎಂದು ಆರ್ ಅಶೋಕ್ ಪ್ರಶ್ನೆ ಮಾಡಿದರು.

ಮಹಿಳೆಯರು ಬಸ್​​​ನಲ್ಲಿ ಉಚಿತವಾಗಿ ಪ್ರಯಾಣಿಸಲಿ. ನಾನು ಕಟ್ಟಲ್ಲ, ನೀವೂ ಕಟ್ಟಬೇಡಿ ಎಂದು ಅವರಿಬ್ಬರು ಹೇಳಿದ್ದಾರೆ. ಹೀಗಾಗಿ ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನಿಸಬಾರದು ಎಂದು ರಾಜ್ಯದ ಜನರಿಗೆ ಆರ್.ಅಶೋಕ್ ಉಚಿತ ಸಲಹೆ ನೀಡಿದರು.

Related