ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ತುಮಕುರು: ಜಿಲ್ಲೆಯ ಮಧುಗಿರಿ ರಾಜೀವ್​ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ಬಹಳಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶಾಲಾ ಮಕ್ಕಳಿಗೆ ಹಾಲು ಕೊಡುವುದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗುತ್ತದೆ. ಪ್ರತಿ ಮಗುವಿಗೂ 150 ಮಿಲಿಲೀಟರ್ ಹಾಲು ನೀಡುವಂತೆ ನಿರ್ಧರಿಸಿದ್ದೆವು ರಾಜ್ಯದ 54 ಲಕ್ಷದ 68 ಸಾವಿರ ಮಕ್ಕಳಿಗೆ ಹಾಲು ಈ ಯೋಜನೆಯಿಂದ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಈ ಯೋಜನೆ 10 ವರ್ಷ ಯಶಸ್ವಿಯಾಗಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಪಡಿತರ ಅಕ್ಕಿಯನ್ನು ಯಾರೂ ಮಾರಾಟ ಮಾಡದಂತೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಎಂ ಮನವಿ ಮಾಡಿದರು. ರಾಜ್ಯದಲ್ಲಿ 4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಪಡಿತರ ಅಕ್ಕಿ ನೀಡ್ತಿದ್ದೇವೆ.
ಕೇಂದ್ರದ ಎಫ್​ಸಿಐಗೆ ಪತ್ರ ಬರೆದ್ರೂ ಹೆಚ್ಚುವರಿ ಅಕ್ಕಿ ರಾಜ್ಯಕ್ಕೆ ಕೊಡಲಿಲ್ಲ. ಬಿಜೆಪಿಯವರು ಶ್ರೀಮಂತರ ಪರವಾಗಿದ್ದಾರೆ, ಅವರು ಬಡವರ ಪರ ಇಲ್ಲ. ರಾಜ್ಯಕ್ಕೆ ಅಕ್ಕಿ ನೀಡುವುದಾಗಿ ಹೇಳಿ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಇವರು ಬಡವರ ವಿರೋಧಿಗಳು, ಎಂತಹ ನೀಚರಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಹಾಗೆಯೆ ಇದೆ ಸಂಧರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 1 ರೂ. ಸಹ ಬಂದಿಲ್ಲ. ಎತ್ತಿನಹೊಳೆ ಯೋಜನೆ ಗೆ ಒತ್ತುಕೊಟ್ಟು ನಾವೇ ಪೂರ್ಣಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್​ವೇ ವ್ಯವಸ್ಥೆ ಕಲ್ಪಿಸುತ್ತೇವೆ. ತಾಯಿ ಮಕ್ಕಳ ಆಸ್ಪತ್ರೆಯನ್ನು ಮುಂದಿನ ವರ್ಷ ಮಂಜೂರು ಮಾಡುತ್ತೇವೆ ಎಂದು ಹೇಳಿದರು.

Related