ಬೆಡ್ ಇಲ್ಲದೆ ನರಳಾಡಿದ ರೋಗಿಗಳು

ಬೆಡ್ ಇಲ್ಲದೆ ನರಳಾಡಿದ ರೋಗಿಗಳು

ಬೀದರ್: ಕೋವಿಡ್ ಆರ್ಭಟಕ್ಕೆ ನಗರದ ಬ್ರಿಮ್ಸ್ ಆವರಣದಲ್ಲಿ ಕೊವೀಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಬೆಡ್‌ಗಳು ಸಿಗದ ಹಿನ್ನಲೆ ಫುಟ್‌ಪಾತ್ ನಲ್ಲೇ ನರಳಾಡುತ್ತಿರುವ ಘಟನೆ ಬುಧವಾರ ನಡೆದಿದೆ.

ಗಡಿ ಜಿಲ್ಲೆಯ ಕಳೆದ 20 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ. 32 ಜನರನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಬ್ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳೆಲ್ಲ ಭರ್ತಿ ಆಗಿದ್ದು, ರೋಗಿಗಳಿಗೆ ಬೆಡ್‌ಗಳ ಕೊರತೆ ಸೃಷ್ಟಿಯಾಗಿದೆ.

ಬುಧವಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೂವರು ಸೋಂಕಿತರು ಚಿಕಿತ್ಸೆಗಾಗಿ  ಬ್ರಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಅವರಿಗೆ ಬೆಡ್ ಅಷ್ಟೇ ಅಲ್ಲ, ಚಿಕಿತ್ಸೆ ಕೊಡಲು ಆರೋಗ್ಯ ಸಿಬ್ಬಂದಿಗಳು ಬಾರದಿರುವುದು ರೋಗಿಗಳು ನರಕಯಾತನೆ ಅನುಭವಿಸುವಂತಾಗಿದೆ.

Related