ಶ್ರಾವಣ ಮಾಸ, ಇಂದಿನಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ

ಶ್ರಾವಣ ಮಾಸ, ಇಂದಿನಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಪರ್ವವೇ ಶುರುವಾದ ಹಾಗೆ. ಹೌದು ಹಿಂದೂ ಸಂಪ್ರದಾಯದ ಪ್ರಕಾರ ಶ್ರಾವಣ ಮಾಸ ಎಂಬುದು ತುಂಬಾ ಶ್ರೇಷ್ಠವಾದ ತಿಂಗಳು ಈ ತಿಂಗಳಿನಲ್ಲಿ ವಿಶಿಷ್ಟವಾಗಿ ಹಲವಾರು ದೇವಾಲಯಗಳಲ್ಲಿ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ರಾಜ್ಯದ ಕೆಲವೊಂದು ಕಡೆ ಶ್ರಾವಣ ಸೋಮವಾರವೆಂದು ಆಚರಿಸಲಾಗುತ್ತದೆ ಇನ್ನು ಕೆಲವೊಂದು ಕಡೆ ಶ್ರಾವಣ ಶನಿವಾರವೆಂದು ಆಚರಿಸಲಾಗುತ್ತದೆ.

ಇಂದಿನಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಶ್ರಾವಣದ ಮೊದಲ ಶನಿವಾರದ ಪ್ರಯುಕ್ತ ಬೆಂಗಳೂರಿನ ಹಲವು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದೆ. ಬೆಂಗಳೂರಿನ ಶ್ರೀನಿವಾಸ, ವೆಂಕಟೇಶ್ವರ ದೇವಸ್ಥಾನಗಳಲ್ಲಿ ಹಾಗೂ ಮೈಸೂರಿನಲ್ಲೂ ಶ್ರೀನಿವಾಸ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

 

Related