ಶ್ರಾವಣ ಮಾಸ: ಹೂ, ಹಣ್ಣು ದುಬಾರಿ

ಶ್ರಾವಣ ಮಾಸ: ಹೂ, ಹಣ್ಣು ದುಬಾರಿ

ಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಕೆಂಪು ಸುಂದ್ರಿ ಟೊಮೆಟೊ ಬೆಲೆ ಗಗನಕೇರಿತ್ತು ಆದರರಿಗ ಟೊಮೇಟೊ ಬೆಲೆ ಕೊಂಚ ಇಳಿಕೆ ಕಂಡಂತಾಗಿದೆ.

ಇನ್ನು ಇಂದಿನಿಂದ ರಾಜ್ಯದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಹೂ, ಹಣ್ಣುಗಳಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

ಮಾರುಕಟ್ಟೆಯಲ್ಲಿ ಒಂದು ಕೆಜಿ ಏಲಕ್ಕಿ ಬಾಳೆಹಣ್ಣಿನ ಬೆಲೆ 100 ರು. ದಾಟಿದೆ. ಅಲ್ಲದೆ, ಕಿತ್ತಳೆ, ಸೇಬು ಹಣ್ಣಿನ ದರವೂ 200 ರು. ದರದಲ್ಲೇ ಇದೆ. ಶ್ರಾವಣ ಮಾಸ ಆರಂಭದಲ್ಲಿ ಯೇ ಹಣ್ಣುಗಳ ಬೆಲೆ ಗಗನಕ್ಕೇರುತ್ತಿದೆ.

ರಾಜ್ಯದಲ್ಲಿ ಮಳೆ ಸರಿಯಾದ ಸಮಯಕ್ಕೆ ಬಾರದ ಕಾರಣ ಬೇಡಿಕೆಯಷ್ಟುಬಾಳೆಹಣ್ಣು ನಗರಕ್ಕೆ ಬರುತ್ತಿಲ್ಲ. ಹೆಚ್ಚಾಗಿ ಬೇಡಿಕೆ ಇರುವ ಏಲಕ್ಕಿ ಹಾಗೂ ಪಚ್ಚ ಬಾಳೆಹಣ್ಣು ಕಡಿಮೆಯಾಗಿವೆ. ನಗರದ ಬಿನ್ನಿಮಿಲ್‌, ಕೆ.ಆರ್‌.ಮಾರುಕಟ್ಟೆಗೆ ತಮಿಳು ನಾಡು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಬಾಳೆಹಣ್ಣು ಸಗಟು ಪ್ರಮಾಣ ಗಣನೀಯವಾಗಿ ಕುಸಿದಿದೆ.

ಸೀಸನ್‌ ಆರಂಭವಾಗುತ್ತಿದ್ದರೂ ಸೇಬು ಹಣ್ಣಿನ ಬೆಲೆ ಇಳಿಕೆಯಾಗಿಲ್ಲ. ಕಳೆದ 2 ತಿಂಗಳಿಂದ ಸೇಬು ಹಣ್ಣು ಕೆಜಿಗೆ 200-250 ರು. ದರದಲ್ಲಿಯೇ ಇದೆ. ಉತ್ತರ ಭಾರತದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯ ಲ್ಲಿ ಸಂಚಾರ ವ್ಯತ್ಯಯವಾಗಿದೆ. ಅಲ್ಲಿಂದ ಸಮರ್ಪಕವಾಗಿ ಹಣ್ಣು ಪೂರೈಕೆ ಆಗುತ್ತಿಲ್ಲ. ಆದ ಕಾರಣ ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಕಂಡು ಬರುತ್ತಿದೆ. ಇದರಿಂದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಹೊ ಹಣ್ಣುಗಳ ಬೆಲೆ ಏರಿಕೆ ತಟ್ಟುವ ಸೂಚನೆ ಇದೆ.

 

Related