‘ರೈತ ಸ್ನೇಹಿ’ಗಳಾಗಬೇಕೇ ಹೊರತು ‘ವ್ಯಾಪಾರಿ ಸ್ನೇಹಿ’ಯಲ್ಲ

‘ರೈತ ಸ್ನೇಹಿ’ಗಳಾಗಬೇಕೇ ಹೊರತು ‘ವ್ಯಾಪಾರಿ ಸ್ನೇಹಿ’ಯಲ್ಲ

ಬೆಂಗಳೂರು : ಕೃಷಿ ಅಧಿಕಾರಿಗಳು ರೈತಸ್ನೇಹಿಗಳಾಗಬೇಕೇ ಹೊರತು ವ್ಯಾಪಾರಿಸ್ನೇಹಿಗಳಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಅಧಿಕಾರಿಗಳು ರೈತಸ್ನೇಹಿಗಳಾಗಬೇಕು. ರೈತರಿಗೆ ಅಧಿಕಾರಿಗಳು ಸ್ಥಳೀಯವಾಗಿ ಸಿಗುವಂತಾಗಬೇಕು. ರೈತರೇ ಉತ್ತಮ ಅಧಿಕಾರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸುವಂತಾಗಬೇಕು.  ಕೃಷಿ ಇಲಾಖೆಯ ಅಭಿವೃದ್ಧಿಗೆ ರೈತರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕು. ಅಧಿಕಾರಿಗಳು ರೈತರ ಅಭಿವೃದ್ಧಿಗಾಗಿ ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು. ಈ ಬಾರಿ 101% ಬಿತ್ತನೆಯಾಗಿರುವುದು ಇಲಾಖೆಯ ಸಾಧನೆಯಾಗಿದೆ ಎಂದರು.

ಸರ್ಕಾರದ ಸೌಲಭ್ಯಗಳಿಗೆ ರೈತರು ತಪ್ಪದೇ ಆಯಪ್ ಬೆಳೆಸಮೀಕ್ಷೆ ತಪ್ಪದೇ ಮಾಡಬೇಕು. ಅಧಿಕಾರಿಗಳು ಇನ್ನಷ್ಟು ಹೆಚ್ಚು ಶ್ರಮ ಮತ್ತು ಆಸಕ್ತಿವಹಿಸಿ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ಸಚಿವರು ಕರೆ ನೀಡಿದರು.

Related