ಆಭರಣ ಪ್ರಿಯರಿಗೆ ಶಾಕ್

ಆಭರಣ ಪ್ರಿಯರಿಗೆ ಶಾಕ್

ಬೆಂಗಳೂರು, ಮಾ. 01 : ಬೆಂಗಳೂರು ಮಾರ್ಚ್ ತಿಂಗಳ ಮೊದಲ ದಿನವೇ ಮತ್ತೆ ಚಿನ್ನದ ಬೆಲೆ  ಅಲ್ಪ ಏರಿಕೆ ಕಂಡಿದೆ. ಭಾನುವಾರ ದೇಶದ 1 ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆ ಕಂಡಿದ್ದು, 4,061 ರೂ. ಆಗಿದೆ. ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ 3,896 ರೂ. ಆಗುವ ಮೂಲಕ ಅಲ್ಪ ಏರಿಕೆ ಕಂಡಿದೆ. ಇದೇ ರೀತಿ ಕೆಜಿ ಬೆಳ್ಳಿ ಬೆಲೆ 48,500 ರೂ ದಾಖಲಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗ್ರಾಂ ಚಿನ್ನಕ್ಕೆ 1 ರೂ ಏರಿಕೆ ಕಂಡು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 38,960 ರೂ. ದಾಖಲಾಗಿದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 48,500 ರೂ. ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10 ರೂ. ಏರಿಕೆಯಾಗಿ 40,710 ರೂಪಾಯಿ ತಲುಪಿದೆ. ಒಂದು ಕೆ.ಜಿ. ಬೆಳ್ಳಿ ದರ 48,500 ರೂಪಾಯಿ ಇದೆ.

Related