ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಬೆಂಗಳೂರು, ಏ. 4: ಕೊರೋನಾದಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿದೆ. ಜನ ಸಾಮಾನ್ಯರು ಮನೆಗಳಿಂದ ಹೊರ ಬಾರದೆ ವೈರಸ್‌ನಿಂದ ಸೋಂಕು ಹರಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಹೀಗಿರುವಾಗಲೇ ಮಿತಿಮೀರಿದ ವೇಗದಲ್ಲಿ ಕಾರು  ಆಕ್ಸಿಡೆಂಟ್ ಮಾಡಿಕೊಂಡಿರುವ ಘಟನೆ ನಡೆದಿದೆ ಬೆಂಗಳೂರಿನಲ್ಲಿ ನಡೆದಿದೆ.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಈ ಅಪಘಾತ ನಡೆದಾಗ ಕಾರಿನಲ್ಲಿ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸಹ ಇದ್ದರಂತೆ. ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಕಾರು ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ತಮ್ಮ ಸ್ನೇಹಿತ ಲೋಕೇಶ್ ಎಂಬುವರ ಜತೆ ಕಾರಿನಲ್ಲಿದ್ದರಂತೆ. ಆದರೆ ಅಪಘಾತವಾದಾಗ ಯಾರು ಕಾರು ಚಾಲನೆ ಮಾಡುತ್ತಿದ್ದರು ಎನ್ನುವುದು ಮಾತ್ರ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

Related