ಅಕ್ರಮ ಪಡಿತರ ಅಕ್ಕಿ ಮಾರಾಟ: ಪ್ರತಿಭಟನೆ

ಅಕ್ರಮ ಪಡಿತರ ಅಕ್ಕಿ ಮಾರಾಟ: ಪ್ರತಿಭಟನೆ

ಗಜೇಂದ್ರಗಡ : ಗದಗ ಜಿಲ್ಲೆಯಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿದೆ. ಅಕ್ರಮ ದಂದೆಗಳು ಈ ಬಿಜೆಪಿ ಸರ್ಕಾರದಲ್ಲಿ ತಲೆ ಎತ್ತಿ ತಾಂಡವ ನೃತ್ಯ ಆಡುತ್ತಿವೆ. ಅದರಲ್ಲಿ ಈ ಅಕ್ರಮ ಅಕ್ಕಿ ಸಾಗಾಟವೂ ಕೂಡ ಒಂದಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷr ಶಿವರಾಜ ಘೋರ್ಪಡೆ ಹೇಳಿದರು.

ತಹಶೀಲ್ದಾರರ ಕಾರ್ಯಲಯದ ಮುಂದೆ ಅಕ್ರಮವಾಗಿ ಪಡಿತರ ಅಕ್ಕಿ ರವಾನೆ ಮಾಡುವುದನ್ನು ಖಂಡಿಸಿ ಪ್ರತಿಭಟನೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಬಳಲಬಾರದು ಎನ್ನುವ ಹಿತದೃಷ್ಟಿಯನ್ನು ಇಟ್ಟುಕೊಂಡು ಅನ್ನಭಾಗವನ್ನು ಜಾರಿಗೆ ತಂದಿದೆ.

ಕಾಂಗ್ರೆಸ್ ಸರ್ಕಾರವು ಇದ್ದಾಗ 7ಕೆ.ಜಿ ಅಕ್ಕಿಯನ್ನು ನೀಡುತ್ತಿತ್ತು ಆದರೆ ಈ ಬಿಜೆಪಿ ಸರ್ಕಾರ ಅದನ್ನು 5 ಕೆ.ಜಿ ಗೆ ಇಳಿಸಿದ್ದು ಅಲ್ಲದೆ ಅಕ್ರಮವಾಗಿ ಸಾಗಾಟ ಮಾಡುವವರ ಬೆನ್ನಿಗೆ ನಿಂತಿದ್ದು ಮೆಲ್ನೊಂಟಕ್ಕೆ ಕಂಡು ಬರುತ್ತಿದೆ.

ತಡರಾತ್ರಿ 3 ಲಾರಿಗಳಲ್ಲಿ ಅಕ್ರಮ ಅಕ್ಕಿ ಲೋಡ ಆಗಿದ್ದು ಈಗ ಕೇವಲ 1 ಲಾರಿಯನ್ನು ಹಿಡಿದು ಅದರ ಮೇಲೆ ಕೇಸ ಮಾಡುವ ಹುನ್ನಾರ ನಡೆಸಿದ್ದಾರೆ. ಹಾಗಾದರೆ ಇನ್ನುಳಿದ 2 ಲಾರಿಗಳು ಹೇಗೆ ಪರಾರಿಯಾದವೂ ಯಾರ ಕಾವಲಿನಲ್ಲಿ ಪರಾರಿಯಾದವು ಎನ್ನುವುದು ಸಾರ್ವಜನಕರಿಗೆ ಸಂಶಯಕ್ಕೆ ನಾಂದಿ ಹಾಡಿದೆ.

ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ ಎ.ಬಿ ಕಲಘಟಗಿ ಇದನ್ನು ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಹಾಗೂ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Related