ಕೇರಳದಲ್ಲಿ ಬಾಲಕ-ಬಾಲಕಿಯರ ಶಾಲೆಗಳು ಸ್ಥಗಿತ..!

  • In State
  • July 22, 2022
  • 209 Views
ಕೇರಳದಲ್ಲಿ ಬಾಲಕ-ಬಾಲಕಿಯರ ಶಾಲೆಗಳು ಸ್ಥಗಿತ..!

ತಿರುವನಂತಪುರಂ, ಜುಲೈ 22 : ಮುಂಬರುವ 2023- 24ನೇ ಶೈಕ್ಷಣಿಕ ವರ್ಷದಿಂದ ಬಾಲಕರು ಮತ್ತು ಬಾಲಕಿಯರಿಗಾಗಿಯೇ ಇರುವ ಶಾಲೆಗಳನ್ನು ಮುಚ್ಚುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಕ್ರವಾರ ಆದೇಶ ನೀಡಿದೆ.

ಈ ಎಲ್ಲಾ ಶಾಲೆಗಳನ್ನು ಬಾಲಕ ಬಾಲಕಿಯರು ಒಟ್ಟಾಗಿ ಕಲಿಯುವ ಸಹ ಶಿಕ್ಷಣ ನೀಡುವ ಮಿಶ್ರ ಶಾಲೆಗಳಾಗಿ ಪರಿವರ್ತಿಸಬೇಕು ಎಂದು ಆಯೋಗ ಹೇಳಿದೆ. ಮಕ್ಕಳ ಹಕ್ಕುಗಳ ಆಯೋಗವು ಕೇರಳ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಾಮಾನ್ಯ ಶಿಕ್ಷಣ ನಿರ್ದೇಶಕರು ಮತ್ತು ಎಸ್ಸಿಇಆರ್ಟಿ ನಿರ್ದೇಶಕರಿಗೆ ಆದೇಶವನ್ನು ಜಾರಿಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಕೇಳಿದೆ.

ಕೋ-ಎಡ್ ಶಾಲೆಗಳಾಗಿ ಪರಿವರ್ತಿಸುವ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಮಿಶ್ರ ಶಾಲೆಯ ಮಹತ್ವದ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮೂವರು ಉನ್ನತ ಅಧಿಕಾರಿಗಳಿಗೆ ಸೂಚಿಲಾಗಿದೆ. ಕೊಲ್ಲಂ ಜಿಲ್ಲೆಯ ಆಂಚಲ್ನ ಡಾ. ಐಸಾಕ್ ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಆಯೋಗ ಈ ಆದೇಶ ನೀಡಿದೆ. ವಿಶೇಷ ಶಾಲೆಗಳಲ್ಲಿ ಲಿಂಗ ಸಮಾನತೆಯನ್ನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

Related