ಸಂಚಲನ ಸೃಷ್ಟಿಸಿದ ಸವದಿ ಹೇಳಿಕೆ

ಸಂಚಲನ ಸೃಷ್ಟಿಸಿದ ಸವದಿ ಹೇಳಿಕೆ

ಬಾಗಲಕೋಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20ರಿಂದ 22 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದು ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ ಲಕ್ಷ್ಮಣ್ ಸವದಿಯ ಹೇಳಿಕೆ. ಹೌದು ರಾಜಕೀಯದಲ್ಲಿ ಈಗಾಗಲೇ ಆಪರೇಷನ್ ಹಸ್ತ ಮತ್ತು ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದ್ದು ಇದರ ಬೆನ್ನಲ್ಲೇ ಲಕ್ಷ್ಮಣ್ ಸೌದಿ ಅವರು ಹೊಸ ಸುದ್ದಿಯೊಂದನ್ನು ಹೇಳಿ ರಾಜ್ಯ ರಾಜಕೀಯದಲ್ಲಿ ಸಂಚಲವನ್ನು ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿರುವ ಸವದಿ, ಬಿಜೆಪಿಯ ಸಾಕಷ್ಟು ಅತೃಪ್ತ ನಾಯಕರು ಸಂಪರ್ಕದಲ್ಲಿದ್ದಾರೆ. ಜನವರಿ 26ರ ನಂತರ ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ. ಆಗ ಎಷ್ಟು ನಾಯಕರು ಬರುತ್ತಾರೆಂದು ನೀವೇ ಎಣಿಕೆ ಮಾಡುವಿರಂತೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಬಿಜೆಪಿಯ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಪಕ್ಷಕ್ಕೆ ಬಂದಮೇಲೆ ಸ್ಥಾನಮಾನ ಬಗ್ಗೆ ಚಿಂತನೆ ಮಾಡಬೇಕು. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು. ಹೀಗಾಗಿ ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಈಗಾಗಲೇ ನಾವು ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

 

Related