ಅಗರ ಕೆರೆ ಅಭಿವೃದ್ಧಿಗೆ ಸತೀಶ್ ರೆಡ್ಡಿ ಚಾಲನೆ

ಅಗರ ಕೆರೆ ಅಭಿವೃದ್ಧಿಗೆ ಸತೀಶ್ ರೆಡ್ಡಿ ಚಾಲನೆ

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಹೆಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ಗುದ್ದಲಿ ಪೂಜೆ ನೆರೆವೇರಿಸಿ ಚಾಲನೆ ನೀಡಿದರು.  ಅಗರ ಕೆರೆಯ ಪರಿಸರವನ್ನು ಕಾಪಾಡುವುದರ ಜೊತೆಗೆ ಅಭಿವೃದ್ಧಿ ಮಾಡುವ ಉದ್ದೇಶದಿಂದ 5 ಕೋಟಿ ರೂ ವೆಚ್ಚದ ಕಾಮಗಾರಿಗೆ ನಡೆಯುತ್ತಿದೆ. ಸ್ಥಳೀಯ ಜನರ ಹಾಗು ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರ ಸಲಹೆ ಪಡೆದು ಕೆಲಸ ಆರಂಭಿಸಿದ್ದೇವೆ. ಶೌಚಾಲಯ, ಪಾದಚಾರಿ ರಸ್ತೆ, ಪೈಪ್ ಲೈನ್ ಸರಿಪಡಿಸುವುದರ ಜೊತೆಗೆ ಇತರೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಗೆ 20 ಕೋಟಿ ರೂ ಮೀಸಲಿಡಲಾಗಿದೆ. ಇಂಬ್ಲೂರು ಕೆರೆ, ಹುಳಿಮಾವು, ಸೋಮಸಂದ್ರ ಕೆರೆಗಳ ಅಭಿವೃದ್ಧಿಗೆ ಹಣಮೀಸಲಿಡಲಾಗಿದೆ. ಕೆರೆಗಳ ಬಗ್ಗೆ ಹೆಚ್ಚು ಕಾಳಜಿಯಿದ್ದು, ಮಲೀನವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಗಳ ಸುತ್ತಮುತ್ತ ಬೀದಿ ದೀಪ ಅಳವಡಿಕೆ, ಗಿಡಗಳಿಗೆ ನೀರಿನ ವ್ಯವಸ್ಥೆ, ಕೂರಲು ಶೆಟ್ಲರ್, ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಬಾಕಿ ಉಳಿದ ಕಾಮಗಾರಿ ವೇಗವಾಗಿ ನಡೆಸಲಾಗುತ್ತದೆ ಎಂದು ಭರವಸೆ ಕೊಟ್ಟರು.

ಅಗರ ಕೆರೆಯಲ್ಲಿ ಸಾಕಷ್ಟು ಮೂಲ ಸೌಕರ್ಯವಿದೆ. ಅದನ್ನೇ ಉನ್ನತ್ತೀಕರಣ ಮಾಡಲಾಗುತ್ತಿದ್ದು, ಅಲ್ಪಸ್ವಲ್ಪ ಸಮಸ್ಯೆಯಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ಬಿಬಿಎಂ ಜಂಟಿ ಆಯುಕ್ತ ರಾಮಕೃಷ್ಣ ಹೇಳಿದ್ದಾರೆ.
ಕಾಮಗಾರಿ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಇಂಜೀನಿಯರ್ ಮೋಹನ್ ಕೃಷ್ಣ ಈ ಕೆರೆ ಅರಣ್ಯ ಇಲಾಖೆಯ ಅಧೀನದಲ್ಲಿತ್ತು. ಅರಣ್ಯ ಇಲಾಖೆಯವರು ಬಿಬಿಎಂಪಿಗೆ ವರ್ಗಾವಣೆ ಮಾಡಿ ಎಂದು ನಂತರ ಸರ್ಕಾರ ಆದೇಶ ಹೊರಡಿಸಿತು. ಈ ಕಾರ್ಯಪ್ರಕ್ರಿಯೆ ವಿಳಂಬವಾಗಿದ್ದರಿAದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವುದು ವಿಳಂಬವಾಗಿದೆ ಎಂದರು.

 

 

 

 

 

Related