ಅಕ್ಕಿ ಮೂಟೆ ಹೊತ್ತ ಶಾಸಕ ಸತೀಶ್ ರೆಡ್ಡಿ

ಅಕ್ಕಿ ಮೂಟೆ ಹೊತ್ತ ಶಾಸಕ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ, ಮಾ. 29: ಕೂಲಿ ಕಾರ್ಮಿಕರು, ಸ್ಲಂ ನಿವಾಸಿಗಳು ಸೇರಿದಂತೆ ವಿವಿದ ರೀತಿಯ ನಿರ್ಗತಿಕರಿಗೆ ನಿತ್ಯೋಪಯೋಗಿ ಗೃಹಬಳಕೆಯ ಆಹಾರ ಪದಾರ್ಥಗಳನ್ನು ಸ್ವತಹ ತಾವೇ ಖುದ್ದಾಗಿ ಸಂಗ್ರಹಿಸುತ್ತಿರುವುದಾಗಿ ಬೊಮ್ಮನಹಳ್ಳಿ ವಿದಾನ ಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅಕ್ಕಿ ಮೂಟೆ ಹೊತ್ತು ತಂದು ಸಂಗ್ರಹಿಸುವ ಮೂಲಕ ಅನ್ನ ದಾಸೋಹದ ಕಾಯಕದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ಇಂದು ರಜಾ ದಿನವಾದರೂ ಕೂಡಾ ಬೊಮ್ಮನಹಳ್ಳಿ ವಿದಾಸಭಾ ಕ್ಷೇತ್ರ ವ್ಯಾಪ್ತಿಯ ಅಗರ ಮತ್ತು ಬೋಪೆನಹಳ್ಳಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಚತೆ ಮತ್ತು ನೈರ್ಮಲ್ಯ ಪರಿಶೀಲನೆ ಮಾಡಿದ ಶಾಸಕರು ಪ್ರತಿಯೊಬ್ಬ ಸಾರ್ವಜನಿಕರು ಸ್ವಚ್ಚತೆಗೆ ಒತ್ತು ನೀಡುವಂತೆ ಮನವಿ ಮಾಡಿದ ಶಾಸಕರು ಕೊರೋನಾ ವೈರಸ್ ತಡೆಗಟ್ಟಲು ಸ್ವಚ್ಚತೆಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ.

ಸಾರ್ವಜನಿಕರಿಗೆ ಅಗತ್ಯವಿರುವ ದಿನ ನಿತ್ಯದ ದಿನಸಿ ವಸ್ತುಗಳನ್ನು ಪೂರೈಕೆ ಮಾಡಲು ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ಮೂಲಕ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ದಾನಿಗಳು ಮತ್ತು ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದ ಆಹಾರ ದಾನ್ಯಗಳನ್ನು ಸಂಗ್ರಹಿಸಿ ಪ್ರತಿ ನಿರ್ಗತಿಕ ಕುಟುಂಬಗಳನ್ನು ಗುರ್ತಿಸಿ ಪ್ರತಿ ಮನೆಗೂ ನಾನೂ ಹಾಗೂ ನಮ್ಮ ಸ್ವಯಂ ಸೇವಕರ ತಂಡ ಪೂರೈಕೆ ಮಡಲಾಗುವುದೆಂದು ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿರ್ಗತಿಕರು, ಪಾಲಿಕೆಯ ಪೌರ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು ಸೇರಿದಂತೆ ಅನಾಥ ಮಕ್ಕಳು ಹಾಗೂ ವಯೋವೃದ್ದರಿಗಾಗಿ ಸುಮಾರು ಎರಡು ಸಾವಿರ ಚಪಾತಿಗಳನ್ನು ತಯಾರಿಸಿ ಪ್ಯಾಕ್ ಮಾಡಲಾಗಿದ್ದು, ಪ್ರತಿ ದಿನ ಅಗತ್ಯಾನುಸಾರಕ್ಕೆ ತಕ್ಕಂತೆ ಊಟ ಸರಬರಾಜು ಮಾಡುವುದಾಗಿ ತಿಳಿಸಿದ್ದಾರೆ.

ಚಪಾತಿ ಜತೆಯಲ್ಲಿ ಅನ್ನ ಸಾಂಬಾರು ಹಾಗೂ ತರಕಾರಿ ಪಲ್ಯಗಳನ್ನು ಊಟಕ್ಕೆ ಸರಬರಾಜು ಮಾಡುವುದಾಗಿ ಸತೀಶ್ ರೆಡ್ಡಿ ಅವರು ತಿಳಿಸಿದ್ದಾರೆ. ಪ್ರಸ್ತುತ ಸಂಗ್ರಹಿಸಲಾಗಿರುವ ಅಕ್ಕಿ, ಬೇಳೆ, ಎಣ್ಣೆ ಹಾಗೂ ಆಹಾರ ಸಾಮಗ್ರಿಗಳನ್ನು ನೇರವಾಗಿ ಫಲಾನುಭವಿಗಳಿಗೆ ಸರಬರಾಜು ಮಾಡುವುದಾಗಿ ತಿಳಿಸಿದರು.

 

Related