ಖಾತೆ ಹಂಚಿಕೆ ಬಗ್ಗೆ ಸಂತೃಪ್ತಿ

ಖಾತೆ ಹಂಚಿಕೆ ಬಗ್ಗೆ ಸಂತೃಪ್ತಿ

ವಿಜಯಪುರ : ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆಯ ಬಳಿಕ ಕೆಲವರಲ್ಲಿ ಹಂಚಿಕೆ ಅಸಮಾಧಾನ ತಂದಿದೆ. ಆದರೆ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸಿದ್ದ ಈಗಿನ ಮುಜರಾಯಿ ಹಾಗೂ ವಕ್ಫ್ ಖಾತೆ ಸಚಿವೆ ಜೊಲ್ಲೆಯವರಿಗೆ ಅಸಮಾಧಾನ ಇಲ್ವಂತೆ ಹೀಗಂತ ಸ್ವತಃ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿ ಇರುವ ಸಚಿವೆ ಜೊಲ್ಲೆ ಸೋಮವಾರ ನಗರದ ಆರಾಧ್ಯದೈವ ಸಿದ್ದೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಶ್ರಾವಣ ಸೋಮವಾರದಂದು ಸಿದ್ದೇಶ್ವರ ದರ್ಶನ ಪಡೆದು ಖಾತೆಯನ್ನು ಸಮರ್ಥ ವಾಗಿ ನಿಭಾಯಿಸುತ್ತೇನೆ ಎಂದರು.

ಖಾತೆ ಕ್ಯಾತೆ ಕುರಿತು ಪ್ರತಿಕ್ರಿಯಿಸಿ ನನಗೆ ಖಾತೆ ಬಗ್ಗೆ ಯಾವುದೇ ಅಸಮಧಾನ ಇಲ್ಲ. ವರಿಷ್ಠರು ಯಾವ ಖಾತೆ ಕೊಟ್ಟಿದ್ದಾರೋ ಆ ಖಾತೆಯನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ನನ್ನ ಉದ್ದೇಶವಾಗಿದೆ. ರಾಜ್ಯದಲ್ಲಿ ಇವತ್ತು ಮಹಾಪೂರ ಬರ್ತಿದೆ. ಕೊರೋನಾ ಇದೇ ಇಂತಹ ಸಮಯದಲ್ಲಿ ಖಾತೆ ಕುರಿತು ಅಸಮಧಾನ ಪಡುವುದು ಸರಿಯಲ್ಲ. ಹೀಗಾಗಿ ನಾನು ಪಕ್ಷ ಕೊಟ್ಟಂತಹ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತೆನೆ ಎಂದರು.

ಈ ಸಂದರ್ಭದಲ್ಲಿ ಖಾತೆ ಕ್ಯಾತೆ ತಗೆದವರಿಗೆ ಬುದ್ದಿವಾದ ಹೇಳಿದ ಸಚಿವೆ ಜೊಲ್ಲೆ ಕೆಲಸ ಮಾಡುವವರಿಗೆ ಯಾವ ಖಾತೆ ಇದರೆ ಏನು ಎಂದು ಪ್ರಶ್ನಿಸಿದರು. ಕೆಲಸ ಮಾಡುವ ಇಚ್ಛೆ ಇತ್ತು, ಜನರಿಗೆ ಸ್ಪಂದಿಸುವ ಇಚ್ಛೆ ಇತ್ತು ಅಂದರೆ ಸಾಕು ಆ ಖಾತೆ ಮುಖಾಂತರ ನಾವು ಕೆಲಸ ಮಾಡಬಹುದು, ರಾಜ್ಯದ ಅಭಿವೃದ್ಧಿ ಮಾಡಬಹುದು ಎಂದರು.

ಇನ್ನೂ ಅವರವರು ಅವರ ಖಾತೆಯನ್ನ ಮುಂದುವರೆಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಇದನ್ನ ಸರಿ ಪಡಿಸಿಕೊಂಡು ನಮ್ಮ ಹಿರಿಯರು ಬಗೆರಿಸುತ್ತಾರೆಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related