ಸಲ್ಮಾನ್ ಖಾನ್ ಸಂಭಾವನೆ ಕೇಳಿದರೆ ದಂಗಾಕ್ತಿರ

ಸಲ್ಮಾನ್ ಖಾನ್ ಸಂಭಾವನೆ ಕೇಳಿದರೆ ದಂಗಾಕ್ತಿರ

ಮುಂಬೈ: ಬಾಲಿವುಡ್ ನ ಬಹುಬೇದಿಕೆ ನಟ ಸಲ್ಮಾನ್ ಖಾನ್ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಕೇವಲ 75 ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿತು ಆದರೆ ಈಗ ಸಲ್ಮಾನ್ ಖಾನ್ ಸಂಭಾವನೆಯನ್ನು ಕೇಳಿದರೆ ನೀವೆಲ್ಲ ದಂಗ್ ಆಗ್ತೀರಾ.

ಹೌದು, ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಸಲ್ಮಾನ್ ಕೂಡ ಒಬ್ಬರು. ಇಂದು ಸಲ್ಮಾನ್ ಖಾನ್ ಅವರು 58ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಚರಣೆಯಲ್ಲಿ ತೊಡಗಿದ್ದು ಸಲ್ಮಾನ್ ಅಭಿಮಾನಿಗಳು ಶುಭಾಶಯ ಸೂರಿಮಳೆಯನ್ನೇ ಸುರಿಸಿದ್ದಾರೆ.

ಬಾಕ್ಸ್ ಆಫೀಸ್ನಲ್ಲಿ ಒಂದರ ಹಿಂದೆ ಒಂದರಂತೆ ಹಲವು ಸೂಪರ್ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸಲ್ಮಾನ್ ಸೂಪರ್ ಸ್ಟಾರ್ ಆಗಿ ಮಿಂಚಿದ್ರು. ಇದೀಗ ಒಂದು ಸಿನಿಮಾಗೆ 70ರಿಂದ 90 ಕೋಟಿ ಸಂಭಾವನೆ ಪಡೆಯುವ ಸಲ್ಮಾನ್ ಖಾನ್ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ನಟರಷ್ಟೇ ಅಲ್ಲದೇ ಉದ್ಯಮಿಯೂ ಕೂಡ ಆಗಿದ್ದಾರೆ.

‘ಸಲ್ಮಾನ್ ಖಾನ್ ಫಿಲ್ಮ್ಸ್ (SKF)’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಜೊತೆಗೆ ಬೀಯಿಂಗ್ ಹ್ಯೂಮನ್ ಎಂಬ ಬ್ರ್ಯಾಂಡ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಇವುಗಳಿಂದ ಭಾರೀ ಹಣ ಗಳಿಸುತ್ತಾರೆ. ಇದಲ್ಲದೇ ಬ್ರಾಂಡ್ ಎಂಡಾರ್ಸ್ ಮೆಂಟ್ ಗಳಿಂದಲೂ ಕೋಟ್ಯಂತರ ರೂ.ಪಡೆದಿದ್ದಾರೆ.

 

Related