ಗೋಣಿಕೊಪ್ಪಲು ಬಳಿ ಹುಲಿ ಸೆರೆ

  • In State
  • March 15, 2020
  • 179 Views
ಗೋಣಿಕೊಪ್ಪಲು ಬಳಿ  ಹುಲಿ ಸೆರೆ

ಮಡಿಕೇರಿ, ಮಾ. 15 : ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಸುಳುಗೋಡುವಿನಲ್ಲಿ ಸತತ ಆರು ಗಂಟೆಯ ಕಾರ್ಯಾಚರಣೆ ನಂತರ ಗಂಡು ಹುಲಿ ಸೆರೆಯಾಗಿದೆ. ಈ ಹುಲಿಯು ಸುಮಾರು 8 ರಿಂದ 9 ವಯಸ್ಸಿನ ಪ್ರಾಯವಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಯ ವೇಳೆಯಲ್ಲಿ ಸುಳುಗೋಡು ಗ್ರಾಮದ ಪಾಸುರ ಕಾಶಿ ಕಾರ್ಯಪ್ಪ ಎಂಬವರು, ತಮ್ಮ ಹಸುವನ್ನು ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು.
ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ತೆರಳಿದಾಗ ಭಾರಿ ಗಾತ್ರದ ಹುಲಿಯೊಂದು ಕೆರೆಯಲ್ಲಿ ನೀರು ಕುಡಿಯುತ್ತಿತ್ತು. ಇದನ್ನು ಕಂಡ ಕಾಶಿಯವರು ಗಾಬರಿಗೊಂಡು ತಮ್ಮ ಹಸುವನ್ನು ಕೆರೆಯ ಏರಿಯಿಂದಲೇ ಕರೆದುಕೊಂಡು ವಾಪಾಸಾಗಿದ್ದಾರೆ. ಅವರು ದೂರದಿಂದ ನಿಂತು ನೀರು ಕುಡಿಯುತ್ತಿದ್ದ ಹುಲಿಯನ್ನು ಗಮನಿಸಿದಾಗ, ಹುಲಿಯು ಘರ್ಜಿಸಿ ಮುಂದೆ ಹೋಗುವ ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.

Related