ರಸ್ತೆ, ಬ್ರೀಜ್ ಕಾಮಗಾರಿ ಪರಿಶೀಲನೆ

ರಸ್ತೆ, ಬ್ರೀಜ್ ಕಾಮಗಾರಿ ಪರಿಶೀಲನೆ

ವಿಜಯಪುರ: ನಾಗಠಾಣ, ಮಿಂಚನಾಳ ಮಧ್ಯ 6 ಕಿ.ಮೀ, ರಸ್ತೆ 2 ಬ್ರೀಜ್ ಒಳಗೊಂಡು ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, 1 ಬ್ರೀಜ್ ಮುಗಿಯುವ ಹಂತದಲ್ಲಿದೆ. ನಾಗಠಾಣ ಹತ್ತಿರದ ಬ್ರೀಜ್‌ಗೆ ಕಾಮಗಾರಿ ನಡೆಯುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಸುಮಾರು 9 ಕೋಟಿ ವೆಚ್ಚದಲ್ಲಿ ಮಿಂಚನಾಳ, ನಾಗಠಾಣ, ಅಲಿಯಾಬಾದ್ ಹಾಗೂ ದ್ಯಾಬೇರಿ, ಭಾಗದ ಮುಖ್ಯ ರಸ್ತೆ ಪೂರ್ಣ ಗೊಂಡಿದ್ದು ಈ ರಸ್ತೆಯ ಮಧ್ಯದಲ್ಲಿ 2 ಬ್ರೀಜ್‌ಗಳ ಕಾಮಗಾರಿ ಅಚ್ಚುಕಟ್ಟಾಗಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿ, ಸಾರ್ವಜನಿಕರಿಗೆ ರಸ್ತೆ, ಬ್ರೀಜ್ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಬಿ. ಪಾಟೀಲ್, ಮುಜುಮದಾರ, ನವೀನ್ ಅರಿಕೇರಿ, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Related