ಅಧಿವೇಶನದಲ್ಲಿ ರೇವಣ್ಣ- ಶಿವಲಿಂಗೇಗೌಡರ ಜಟಾಪಟಿ

ಅಧಿವೇಶನದಲ್ಲಿ ರೇವಣ್ಣ- ಶಿವಲಿಂಗೇಗೌಡರ ಜಟಾಪಟಿ

ಬೆಳಗಾವಿ: ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಇಂದಿಗೆ ಎರಡು ದಿನ ತುಂಬುತ್ತಾ ಬಂದಿದೆ ಸದನದಲ್ಲಿ ಕಾಂಗ್ರೆಸ್ ಶಾಸಕ ಮತ್ತು ಜೆಡಿಎಸ್ ನ ನಾಯಕ ರೇವಣ್ಣ ಅವರ ಮಧ್ಯೆ ಜಟಾಪಟಿ ನಡೆದಿದ್ದು, ಕಾಂಗ್ರೆಸ್ನ ಶಾಸಕ ಶಿವಲಿಂಗೇಗೌಡ ರೇವಣ್ಣ ಅವರ ವಿರುದ್ಧ ನೀವು ಮಾನಗೆಟ್ಟ ಕೆಲಸವನ್ನು ಮಾಡುತ್ತಿದ್ದೀರಾ ಎಂದು ಸದನದಲ್ಲಿ ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕೊಬ್ಬರಿ ಬೆಲೆ ಕುಸಿತ ವಿಚಾರ ಪ್ರಸ್ತಾವನೆಯನ್ನು ಶಾಸಕ ರಾಮಲಿಂಗೇಗೌಡ ಅವರು ಸದನದಲ್ಲಿ ಇದರ ಬಗ್ಗೆ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿ  ಜೆಡಿಎಸ್ ನ ನಾಯಕ ರೇವಣ್ಣ ಅವರು ಅಧಿವೇಶನದಲ್ಲಿ ನಾನು ಮೊದಲು ಬಂದಿದ್ದು ನನಗೆ ಮಾತನಾಡಲು ಬಿಡಿ ಎಂದು ಒಬ್ಬರಿಗೊಬ್ಬರು ಬೈದಾಡುತ್ತ ಸದನದಲ್ಲಿ ಕಾಳಗ ನಡೆಸಿದ್ದಾರೆ.

ಜೆಡಿಎಸ್ ಸದಸ್ಯರ ನಡೆಯಿಂದ ಸಿಟ್ಟಿಗೆದ್ದ ಶಿವಲಿಂಗೇಗೌಡ ಅವರು ಜೆಡಿಎಸ್‌ನ ರೇವಣ್ಣ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿ ಸದನವನ್ನು ಮುಂದೂಡುವಂತಾಯಿತು.

ಶೂನ್ಯ ವೇಳೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕೊಬ್ಬರಿ ಬೆಲೆ ವಿಚಾರದ ಬಗ್ಗೆ ಪ್ರಸ್ತಾಪಿಸಲು ಶಿವಲಿಂಗೇಗೌಡರಿಗೆ ಅವಕಾಶ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ರೇವಣ್ಣ ಅವರು, ಈ ಬಗ್ಗೆ ನಾವು ಮೊದಲು ಪ್ರಸ್ತಾಪ ಕೊಟ್ಟಿದ್ದೇವೆ. ನಮಗೆ ಮೊದಲು ಅವಕಾಶ ಕೊಡಿ ಎಂದರು.

 

Related