ಭಾರತ-ಅಫ್ಘಾನಿಸ್ತಾನ ವಹಿವಾಟುಗೆ ನಿರ್ಬಂಧ

ಭಾರತ-ಅಫ್ಘಾನಿಸ್ತಾನ ವಹಿವಾಟುಗೆ ನಿರ್ಬಂಧ

ನವದೆಹಲಿ: ಕಾಬೂಲ್ ಪ್ರವೇಶಿಸಿ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಭಾರತದೊಂದಿಗೆ ಆಮದು ಮತ್ತು ರಫ್ತು ವ್ಯವಹಾರಗಳನ್ನು ನಿಲ್ಲಿಸಿದೆ.
ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ (ಎಫ್ ಐಇಒ) ನ ಮಹಾ ನಿರ್ದೇಶಕ (ಡಿಜಿ) ಡಾ. ಅಜಯ್ ಸಹಾಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ, ತಾಲಿಬಾನ್ ಪಾಕಿಸ್ತಾನದ ಸಾರಿಗೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದ್ದು, ದೇಶದಿಂದ ಆಮದನ್ನು ನಿಲ್ಲಿಸಿದೆ ಎಂದು ಹೇಳಿದರು.
ಆಮದು ಪಾಕಿಸ್ತಾನದ ಸಾರಿಗೆ ಮಾರ್ಗದ ಮೂಲಕ ಬರುತ್ತಿದ್ದು, ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ, ಆದ್ದರಿಂದ ಆಮದು ನಿಂತಿದೆ ಎಂದು ಎಫ್‌ಇಒ ಡಿಜಿ ತಿಳಿಸಿದ್ದಾರೆ.
ಭಾರತವು ಅಫ್ಘಾನಿಸ್ತಾನದ ಅತಿದೊಡ್ಡ ಪಾಲುದಾರ ದೇಶವಾಗಿದ್ದು, ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು 2021 ಕ್ಕೆ ಸುಮಾರು 835 ಮಿಲಿಯನ್ ಡಾಲರ್‌ನಷ್ಟಿದೆ. ನಾವು ಸುಮಾರು 510 ಮಿಲಿಯನ್ ಡಾಲರ್‌ನಷ್ಟು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವ್ಯಾಪಾರದ ಹೊರತಾಗಿ, ಸುಮಾರು 3 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆ. ಸುಮಾರು 400 ಯೋಜನೆಗಳಿಗೆ ಆರ್ಥಿಕ ಸಹಾಯ ನೀಡಿದ್ದೇವೆ ಎಂದು ಸಹಾಯ್ ವಿವರಿಸಿದರು.

Related