ಆಮದು ಪ್ರಕ್ರಿಯೆ ಕೈ ಬಿಡಲು ಆಗ್ರಹ

ಆಮದು ಪ್ರಕ್ರಿಯೆ ಕೈ ಬಿಡಲು ಆಗ್ರಹ

ನರಗುಂದ : ಉಕ್ರೇನಿನಿಂದ 5ಲಕ್ಷ ಟನ್ ಮೆಕ್ಕೆಜೋಳ ಆಮದು ಮಾಡಿಕೊಳ್ಳುವ ಉದ್ದೇಶ ಕೇಂದ್ರ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ, ಕಾಂಗ್ರೆಸ್ ಸದಸ್ಯರು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ದೇಶ, ರಾಜ್ಯದಲ್ಲಿ ರೈತರು ಬೇಸಾಯ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಆಮದು ಕ್ರಿಯೆಯನ್ನು ತಕ್ಷಣ ಕೈ ಬೀಡಬೇಕು.

ನಮ್ಮ ದೇಶಿಯ ಪದ್ದತಿಯಲ್ಲಿ ರೈತಾಪಿ ವರ್ಗಕ್ಕೆ ಹೆಚ್ಚಿನ ಮಾನ್ಯತೆ ಇದನ್ನು ಕೇಂದ್ರ ಸರ್ಕಾರ ಅವಲೋಕಿಸುವುದು ಒಳಿತು. ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಮಾನ್ಯತೆ ಮಾಡಬೇಕು. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರದ ಆಡಳಿತ ಮುಂದುವರೆಸಬೇಕು ಎಂದರು.

ಆಮದು ಪ್ರಕ್ರಿಯೆಯಿಂದ ಬೆಳೆದ ಮೆಕ್ಕೆಜೋಳದ ಬೆಲೆ ನಿಗದಿತ ಅವಧಿಯಲ್ಲಿ ಮೌಲ್ಯ ಕುಸಿಯುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

Related