ಲಸಿಕೆ ಪಡೆದುಕೊಳ್ಳಲು ಮನವಿ

ಲಸಿಕೆ ಪಡೆದುಕೊಳ್ಳಲು ಮನವಿ

ಔರಾದ: ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ಲಸಿಕೆ ಮೇಳದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಲಾಯಿತು. ಕೇಂದ್ರದಲ್ಲಿ 98 ಜನರಿಗೆ ಲಸಿಕೆ ನಿಡಲಾಗಿದೆ.

ಗ್ರಾಮದ ಬಡಾವಣೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಪಾದಯಾತ್ರೆ ನಡೆಸಿದ ಲಸಿಕೆ ಪಡೆದು ಕೋಳಿ ಎಂದು ಮನೆ ಮನೆಗೂ ಭೇಟಿ ನೀಡಿ ಸೋಂಕು ತಡೆಗಟ್ಟಲು ಲಸಿಕೆ ಒಂದೇ ಪರಿಹಾರವಾಗಿದೆ ಎಂದು ಜನರಿಗೆ ತಿಳಿಸಿದರು.
ಜನರು ಯಾವುದೇ ವದಂತಿಗಳಿಗೆ ಕಿವಿಗೂಡದೇ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದು ಕೊಳ್ಳಬೇಕು ಎಂದು ಪಿಡಿಒ ವಿಜಯಮಾಹಾಲಕ್ಷ್ಮಿ ಹೆಳಿದ್ದರು.

ಈ ಸಂದರ್ಭದಲ್ಲಿ ಗ್ರ.ಪಂ ಅಧ್ಯಕ್ಷರು ಸರಸ್ವತಿ ಅಪ್ಪಾರಾವ, ಗ್ರಾಮದ ಮುಖಂಡ ಶ್ರೀಮಂತ ಪಾಟೀಲ್, ಶಿವಾನಂದ, ಸಿರಿನಾ, ಅನಿತಾ, ಸುಭ ಮಂಗಳಾ ಅಂಗನವಾಡಿ ಸಿಬ್ಬಂದಿ, ಜಗದೆವಿ, ರೆಖಾ, ಆಶಾ ಕಾರ್ಯಕರ್ತರು ಬಸವ ಸ್ವಾಮಿ ಮುಖ್ಯೋಪಾಧ್ಯಾಯರು, ವಿಜಯಕುಮಾರ್, ಕಾಶೀನಾಥ್, ಗ್ರಾ.ಪಂ ಸದಸ್ಯರು ಇದ್ದರು.

Related