ಪೆಟ್ರೋಲ್ ಬಂಕ್ ಸ್ಥಳಾಂತರಕ್ಕೆ ಆಗ್ರಹ

ಪೆಟ್ರೋಲ್ ಬಂಕ್ ಸ್ಥಳಾಂತರಕ್ಕೆ ಆಗ್ರಹ

ತಿಪಟೂರು: ನಗರದ ಅತ್ಯಂತ ಜನನಿಬಿಡ ಪ್ರದೇಶವೆಂದೇ ಕರೆಸಿಕೊಳ್ಳುವ ಗಾಂಧಿನಗರ ಭೋವಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಭೋವಿ ಕಾಲೊನಿ ಸಾರ್ವಜನಿಕ ಹಿತಾಸಕ್ತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.
ನಗರದ ಭೋವಿ ಕಾಲೋನಿ ಶಾಲೆಯ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಈಗ ವಿವಾದಕ್ಕೆ ನಾಂದಿ ಹಾಡಿದೆ. ಸರ್ಕಾರಿ ಶಾಲೆ ಪಕ್ಕದಲ್ಲೇ ನಿರ್ಮಿಸಲಾಗುತ್ತಿರುವ ಪೆಟ್ರೋಲ್ ಬಂಕ್ ಸ್ಥಳಾಂತರಕ್ಕೆ ಎಸ್‌ಎಂಸಿ ಅಧ್ಯಕ್ಷರು ನಗರಸಭೆ ಸದಸ್ಯರು ಈಗಾಗಲೇ ಒತ್ತಾಯಿಸಿದ್ದು ಶಾಲೆಯಿಂದ ಕೂದಲೆಳೆ ದೂರದಲ್ಲಿ ನಿರ್ಮಾಣವಾಗುತ್ತಿರುವ ಈ ಪೆಟ್ರೋಲ್ ಬಂಕ್ ಒಂದು ವೇಳೆ ಅವಘಡ ಸಂಭವಿಸಿದರೆ ಭಾರೀ ಅನಾಹುತ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸುಮಾರು ಹತ್ತರಿಂದ ಇಪ್ಪತ್ತು ಹೆಜ್ಜೆಗಳಷ್ಟು ಮುಂದೆ ಸಾಗಿದರೆ ರಂಗನಾಥ ಐಟಿಐ ಕಾಲೇಜಿದ್ದು ಪಕ್ಕದಲ್ಲೇ ಸರ್ಕಾರಿ ಶಾಲೆಯೂ ಕೂಡ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಈಗ ನಿರ್ಮಿಸುತ್ತಿರುವ ಪೆಟ್ರೋಲ್ ಬಂಕ್ ಸ್ಥಳದಲ್ಲೇ ಟೈರ್ ರಿಬೆಲ್ಟ್ ಘಟಕವೂ ಇದ್ದು ಒಂದು ವೇಳೆ ಅವಘಡಗಳು ಸಂಭವಿಸಿದರೆ ಆದರೆ ಭಾರಿ ಅನಾಹುತವಾಗುತ್ತದೆ ಎಂದು ಇದೇ ವೇಳೆ ಅವರು ಎಚ್ಚರಿಸಿದ್ದಾರೆ. ಈ ಕೂಡಲೇ ಸ್ಥಳೀಯ ಆಡಳಿತ ಹಾಗೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಜೀವ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related