ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಮನವಿ

ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಮನವಿ

ಗುರುಮಠಕಲ್ :  ತಾಲ್ಲೂಕಿನಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಕಡಿವಾಣ ಹಾಕುವಂತೆ ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲ್ಲೂಕು ಘಟಕದಿಂದ ಸಹಾಯ ಆಯುಕ್ತಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿ, ತಾಲ್ಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಸಾಗಾಣಿಕೆಯನ್ನು ತಡೆಯಲು ಹೋದ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ. ಹಳ್ಳ ಕೊಳ್ಳ ಗಳಿಂದ ಅಕ್ರಮ ಸಾಗಾಣಿಕೆ ನಡೆಯುತ್ತಿದ್ದು, ಮರಳು ಮಾಫಿಯ ದಂಧೆ ಮಿತಿಮೀರಿದೆ.
ಇದರಿಂದ ಭೂ ಕುಸಿತ ಪರಿಸರ ನಾಶ, ಅಂತರ್ಜಲ ಮಟ್ಟ ಕುಸಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಪ್ರತ್ಯೇಕ ಸಮಿತಿ ರಚನೆ ಮಾಡಲು ಶಿಫಾರಸ್ಸು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಲಾಲಪ್ಪ ತಲಾರಿ, ನರಸಿಂಹಲು ಗಂಗಾನೋಳ್, ರಾಮುಲು ಕೋಡಗಂಟಿ, ಶಂಕರ್ ನಾಗವೋಳ್, ರಿಯಾಜ್, ವೀರೇಶ್, ಬನ್ನು ಮಡುಗು, ನರಸಪ್ಪ ದರಂಪುರ, ನರಸಿಂಹ, ಮುಖಂಡರು, ಸಂಘಟನೆ ಕಾರ್ಯಕರ್ತರು ಇದ್ದರು.

Related