ಗ್ರಾ.ಪಂ ಮತಗಟ್ಟೆಯಲ್ಲಿ ನಿರುಪಯುಕ್ತ ಶೌಚಾಲಯ

ಗ್ರಾ.ಪಂ ಮತಗಟ್ಟೆಯಲ್ಲಿ ನಿರುಪಯುಕ್ತ ಶೌಚಾಲಯ

ಗಜೇಂದ್ರಗಡ : ಗ್ರಾಮ ಪಂಚಾಯತ್ 2 ನೇ ಹಂತದ ಚುನಾವಣೆ ಹಿನ್ನಲೆಯಲ್ಲಿ ಲಕ್ಕಲಕಟ್ಟಿ ಗ್ರಾ.ಪಂ ಬೂತನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ. ಬೂತಗಳಲ್ಲಿ ಮಹಿಳಾ ಸಿಬ್ಬಂದಿಗಳು ಇದ್ದು ಅವರಿಗೆ ಸಮರ್ಪಕವಾದ ಶೌಚಾಲಯದ ಇಲ್ಲದಿರುವುದು ಗ್ರಾ.ಪಂ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಗಂಡಸರು ಹೇಗೋ ಬಯಲಿಗೆ ಹೋಗಿ ದಿನ ನಿತ್ಯದ ಕರ್ಮವನ್ನು ಮುಗಿಸುತ್ತಾರೆ ಆದರೆ ಮಹಿಳೆಯರು ಹೇಗೆ ತಮ್ಮ ದಿನ ನಿತ್ಯದ ಕಾರ್ಯವನ್ನು ನಿಬಾಯಿಸುವರು, ಹಾಗೂ ಬೂತಗೆ ಅಧಿಕಾರಿಗಳು ಬಂದು 1 ತಾಸು ಆದರೂ ಅವರಿಗೆ ಕೂಡಲು ಆಸನದ ವ್ಯವಸ್ಥೆಯೂ, ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ ಎಂದು ಸಾರ್ವಜನಿಕರು ಪಿ.ಡಿ.ಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Related