ಎನ್.ಇ.ಪಿ ಬಗ್ಗೆ ಚರ್ಚಿಸಲು ಸಿದ್ಧ : ಬಸವರಾಜ ಬೊಮ್ಮಾಯಿ

ಎನ್.ಇ.ಪಿ ಬಗ್ಗೆ ಚರ್ಚಿಸಲು ಸಿದ್ಧ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಎನ್.ಇ.ಪಿ (ಹೊಸ ಶಿಕ್ಷಣ ನೀತಿ) ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿ.ಬಿ.ಎಂ.ಪಿ ಆಯೋಜಿಸಿದ್ದ ಭಾರತದ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ೧೬೧ ನೇ ಜಯಂತಿ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇಂದಿನ ಕಾಲಕ್ಕೆ ತಕ್ಕ ಹಾಗೆ ಪ್ರಸ್ತುತವಾಗುವಂತೆ, ಯುವಕರಿಗೆ ಉತ್ತಮ ಭವಿಷ್ಯ ನೀಡುವಂತೆ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸದುದ್ದೇಶವಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು. ಪ್ರೌಢಶಿಕ್ಷಣದ ಬಗ್ಗೆ ಸಮಿತಿ ರಚಿಸಿ ಅನುಷ್ಠಾನದ ಬಗ್ಗೆ ತೀರ್ಮಾನಿಸಲಾಗುವುದು. ಯಾರೂ ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

Related